ಮೊಸಳೆಗಿಂತ ಉತ್ತಮ!

7

ಮೊಸಳೆಗಿಂತ ಉತ್ತಮ!

Published:
Updated:

‘ಬಾವಿಯೊಳಗಿನ ಕಪ್ಪೆ’ (ವಾ.ವಾ., ಏ. 11) ಎಂಬ ಎ.ಎ.ಎನ್ ಸ್ವಾಮಿಯವರ ಪತ್ರಕ್ಕೆ ಈ ಪ್ರತಿಕ್ರಿಯೆ: ‘ಆನೋ ಭದ್ರಃ ಕೃತವೋಯಂತು ವಿಶ್ವತಃ’ ಸರಿಯಾದ ವಾಕ್ಯ, ಋಗ್ವೇದದಲ್ಲಿದೆ; ಎರಡನೆಯದು ‘ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ’ ಇದು ಸರಿಯಾದ ವಾಕ್ಯ, ಭಗವದ್ಗೀತೆಯಲ್ಲಿದೆ.

ಇಂಥ ಉಕ್ತಿಗಳನ್ನು ಟೀಕಿಸುವ ನಾವು, ಭಯಾನಕ ಆಜ್ಞೆಗಳನ್ನು ಮಾಡುವ ಆಕ್ರಮಣಕಾರಿ, ವಿದೇಶಿ ಧರ್ಮಗಳ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತೇವೆ! ‘ಕ್ರೂರ ಮೊಸಳೆ’ಗಿಂತ ಕಪ್ಪೆ ಉತ್ತಮ ಅಲ್ಲವೇ? ‘ಸ್ವ ಧರ್ಮೇ ನಿಧನಂ ಶ್ರೇಯಃ’ ಎಂಬುದು ಅತ್ಯಂತ ಮೃದುವಾದ ರಕ್ಷಣಾ ತಂತ್ರವಾಗಿದ್ದು, ನಮ್ಮ ಉಳಿವಿಗಾಗಿ (ವಿಸ್ತರಣೆಗಾಗಿ ಅಲ್ಲ) ಇಷ್ಟನ್ನೂ ಮಾಡಬಾರದೆಂದರೆ ಹೇಗೆ?

ಸಾವಿರಾರು ವರ್ಷಗಳ ಕಾಲ ಪರಧರ್ಮೀಯರ ಆಕ್ರಮಣಕ್ಕೆ ತುತ್ತಾಗಿ, ಕೋಟ್ಯಂತರ ಜನರು ಮತಾಂತರಗೊಂಡು, ದೇಶ ಇಬ್ಭಾಗವಾಗಿ, ದಿನನಿತ್ಯ ಕ್ರೌರ್ಯ ಅನುಭವಿಸುತ್ತಿರುವ ನಾವು ನಮ್ಮನ್ನೇ ‘ಮತಾಂಧರು’ ಎಂದು ಕರೆದುಕೊಳ್ಳುತ್ತಾ ಆತ್ಮಘಾತ ಮಾಡಿಕೊಳ್ಳುವುದು ‘ಸಾವಿಗೆ’ ಸಮಾನವಾದುದು. ಸ್ವಾಮಿ ವಿವೇಕಾನಂದರು ನಮ್ಮದೇ ‘ಮತಾಂಧತೆ’ ಎಂದಿದ್ದು ನಾನೆಲ್ಲೂ ಓದಿಲ್ಲ, ಕೇಳಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳೋಣ.

ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry