ಶುಕ್ರವಾರ, ಡಿಸೆಂಬರ್ 13, 2019
19 °C

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮನೆ ಮೇಲೆ ಗುಂಡಿನ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮನೆ ಮೇಲೆ ಗುಂಡಿನ ದಾಳಿ

ಲಾಹೋರ್‌: ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಇಜಾಜ್‌ ಉಲ್‌ ಅಹ್ಸಾನ್‌ ಅವರ ಮನೆ ಮೇಲೆ ಅಪರಿಚಿತರು ಭಾನುವಾರ ಗುಂಡಿನ ದಾಳಿ ನಡೆಸಿದ್ದಾರೆ.

ನ್ಯಾಯಮೂರ್ತಿ ಅಹ್ಸಾನ್‌ ಅವರ ಮನೆ ಮೇಲೆ ಬೆಳಿಗ್ಗೆ 4.30ಕ್ಕೆ ಒಮ್ಮೆ ಮತ್ತು 9 ಗಂಟೆಗೆ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ ಎಂದು ಸುಪ್ರೀಂಕೋರ್ಟ್‌ ಪ್ರಕಟಣೆ ತಿಳಿಸಿದೆ.

ಮನೆಯ ಪ್ರವೇಶದ್ವಾರದಲ್ಲಿ ಒಂದು ಮತ್ತು ಅಡುಗೆ ಮನೆ ಕಿಟಕಿಗೆ ಮತ್ತೊಂದು ಗುಂಡು ಹಾರಿಸಲಾಗಿದೆ.  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಾಕಿಬ್ ನಿಸಾರ್‌ ಅವರು ಅಹ್ಸಾನ್‌ ಅವರ ಮನೆಗೆ ಭೇಟಿ ನೀಡಿದ್ದಾರೆ. ಪಂಜಾಬ್‌ ಪೊಲೀಸ್‌ ಮಹಾನಿರ್ದೇಶಕ ಆರಿಫ್ ನವಾಜ್ ಖಾನ್ ಅವರ ಜತೆ ಘಟನೆ ಸಂಬಂಧ ವಿವರ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)