ಶುಕ್ರವಾರ, ಡಿಸೆಂಬರ್ 6, 2019
26 °C

ಕ್ಷಿಪಣಿಯ ಪರೀಕ್ಷೆ ನಡೆಸಿದ ಪಾಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕ್ಷಿಪಣಿಯ ಪರೀಕ್ಷೆ ನಡೆಸಿದ ಪಾಕ್‌

ಇಸ್ಲಾಮಾಬಾದ್‌: ದೇಶಿ ನಿರ್ಮಾಣದ ಬಾಬರ್‌ ಯುದ್ಧ ಕ್ಷಿಪಣಿಯ ಸುಧಾರಿತ ಮಾದರಿ ‘ಬಾಬರ್ ಶಸ್ತ್ರ ವ್ಯವಸ್ಥೆ–1(ಬಿ)’ಯ ಪರೀಕ್ಷೆಯನ್ನು ಪಾಕಿಸ್ತಾನ ಯಶಸ್ವಿಯಾಗಿ ನಡೆಸಿದೆ.

‘ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು 700 ಕಿ.ಮೀವರೆಗೆ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಕೆಳಮಟ್ಟದಲ್ಲಿ ಹಾರಲಿದ್ದು, ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತದೆ. ಇದರಲ್ಲಿ ಆಧುನಿಕ ವೈಮಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ನೆಲ ಮತ್ತು ಸಮುದ್ರದ ಗುರಿಗಳನ್ನು ನಿಖರವಾಗಿ ತಲುಪಲಿದೆ’ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.

ಪ್ರತಿಕ್ರಿಯಿಸಿ (+)