ಅತ್ಯಾಚಾರ: ಕಠಿಣ ಕಾನೂನು ಕಾರ್ಯರೂ‍ಪಕ್ಕೆ ತರಲು ಕಷ್ಟವೇಕೆ?

7

ಅತ್ಯಾಚಾರ: ಕಠಿಣ ಕಾನೂನು ಕಾರ್ಯರೂ‍ಪಕ್ಕೆ ತರಲು ಕಷ್ಟವೇಕೆ?

Published:
Updated:

ಕಠಿಣವಾದ, ಚುರುಕಾದ, ಮಾತುಕತೆಗೆ ಒಳಗಾಗದ ರೀತಿಯಲ್ಲಿ ಡಿಮಾನಿಟೈಸೇಶನ್ ಅನ್ನು ರಾತ್ರೋರಾತ್ರಿ ಕಾರ್ಯರೂಪಕ್ಕೆ ತಂದ ಹಾಗೆ, ಈ ಅತ್ಯಾಚಾರಿಗಳು/ ಕೊಲೆಗಾರರನ್ನು ಅವರು ಸಾಯುವ ತನಕ ಸಾರ್ವಜನಿಕ ದೃಷ್ಟಿಯಲ್ಲಿ ಶಿಕ್ಷಿಸುವ ಕಾನೂನನ್ನು ಕಾರ್ಯರೂಪಕ್ಕೆ ತರಲು ಯಾಕೆ ಕಷ್ಟ? ಅವರು ಅತ್ಯಾಚಾರ ಮತ್ತು ಕೊಲೆ ನಡೆಸಿದ ಅದೇ ರೀತಿಯಲ್ಲೇ ಅವರನ್ನು ಯಾಕೆ ಶಿಕ್ಷಿಸಬಾರದು?

ಸುಚೀಂದ್ರ, @suchisow9

ಕನಾ೯ಟಕದಾಗ ಕಾಂಗ್ರೆಸ್ ಪಕ್ಷ ಚುನಾವಣೆ ಪೂವ೯ದಲ್ಲೇ ಮುಳುಗಿ ಹೋಗುತ್ತದೆ ಅಂತ ಇವತ್ತು ಶಿವಮೊಗ್ಗದಲ್ಲಿ ಖ್ಯಾತ ಹಾಸ್ಯ ಕವಿ, ತ್ರಿಲೊಕ ಜ್ಞಾನಿ ಹಾಗೂ ಬಿಜೆಪಿ ಪಕ್ಷದ ನಾಯಕರೂ ಆದ ಶ್ರೀ ಶ್ರೀ ಶ್ರೀ ಈಶ್ವರಪ್ಪನವರು ಹೇಳಿದ್ದಾರೆ. ಕಾಕಾ ನಿನ್ನ ತಾಟದಾಗ ಹೆಗ್ಗಣಾ ಬಿದ್ದತಿ, ಮಂದಿ ತಾಟನ್ಯಾಗ ನೊಣಾ ಹುಡಕಾಕತ್ತದಿ ಏನ.

ವಿನೋದ್‌ ಜಿ. ಶಿಂಪಿ ‏ @VinodGShimpi1

ಅಂಬೇಡ್ಕರ್ ಭಾಗ್ಯ

ಅವರು ಪೂಜಿಸಿದರೆಂದು ಇವರು ತೊಳೆದರು, ಇವರು ಮುಟ್ಟಿದರೆಂದು ಅವರು ಶುಚಿಗೊಳಿಸಿದರು. ಅಂತೂ ಕಲ್ಲು ಅಂಬೇಡ್ಕರರಿಗೆ ಚುನಾವಣೆ ಮುಗಿಯುವ ತನಕ ದಿನಾ ಸ್ನಾನಭಾಗ್ಯ!

ಗೋಪಿನಾಥ್‌ ರಾವ್‌, ‏ @gopinathraok

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry