ನೈಟ್ ಕ್ಲಬ್ ಉದ್ಘಾಟಿಸಿದ ಸನ್ಯಾಸಿ ಸಾಕ್ಷಿ ಮಹಾರಾಜ್!

7

ನೈಟ್ ಕ್ಲಬ್ ಉದ್ಘಾಟಿಸಿದ ಸನ್ಯಾಸಿ ಸಾಕ್ಷಿ ಮಹಾರಾಜ್!

Published:
Updated:
ನೈಟ್ ಕ್ಲಬ್ ಉದ್ಘಾಟಿಸಿದ ಸನ್ಯಾಸಿ ಸಾಕ್ಷಿ ಮಹಾರಾಜ್!

ಲಖನೌ: ಉನ್ನಾವ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಭಾನುವಾರ ನೈಟ್‌ ಕ್ಲಬ್‌ ಹಾಗೂ ಹುಕ್ಕಾಬಾರ್ ಉದ್ಘಾಟಿಸಿರುವುದು ಹಲವರ ಟೀಕೆಗೆ ಕಾರಣವಾಗಿದೆ.

ಇಲ್ಲಿನ ಅಲಿಗಂಜ್‌ನಲ್ಲಿ ಹುಕ್ಕಾಬಾರ್ ಮತ್ತು ನೈಟ್‌ಕ್ಲಬ್‌ ಅನ್ನು ಮಹಾರಾಜ್ ಉದ್ಘಾಟಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಲಬ್ ಮಾಲೀಕರು ಹಂಚಿರುವ ಆಹ್ವಾನ ಪತ್ರಿಕೆಯಲ್ಲಿ ಸಾಕ್ಷಿ ಮಹಾರಾಜ್ ಹೆಸರು ಮುದ್ರಣವಾಗಿದೆ. ಅವರು ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. 

ಕೆಲವು ಸಮಯದಿಂದ ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ಸಾಕ್ಷಿ ಮಹಾರಾಜ್ ಅವರ ಪರಿಚಯವಿದೆ ಎಂದು ಕ್ಲಬ್ ಮಾಲೀಕರು ಹೇಳಿದ್ದಾರೆ. ನೈಟ್‌ಕ್ಲಬ್‌ನಲ್ಲಿ ಹುಕ್ಕಾಬಾರ್ ಇರುವ ಕುರಿತು ನನಗೆ ಮಾಹಿತಿ ಇರಲಿಲ್ಲ ಎಂದು ಮಹಾರಾಜ್ ತಿಳಿಸಿದ್ದಾರೆ. ‍ಪ್ರಕರಣ ಕುರಿತು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸನ್ಯಾಸಿ ಆಗಿರುವ ಸಾಕ್ಷಿ ಮಹಾರಾಜ್ ನೈಟ್‌ಕ್ಲಬ್ ಉದ್ಘಾಟಿಸಬಾರದಿತ್ತು ಎಂದು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry