ಶುಕ್ರವಾರ, ಡಿಸೆಂಬರ್ 6, 2019
24 °C

ಕುಸಿದು ಬಿದ್ದ ಸ್ಕಾಟ್ಲೆಂಡ್‌ನ ಮ್ಯಾರಥಾನ್ ಓಟಗಾರ

Published:
Updated:
ಕುಸಿದು ಬಿದ್ದ ಸ್ಕಾಟ್ಲೆಂಡ್‌ನ ಮ್ಯಾರಥಾನ್ ಓಟಗಾರ

ಗೋಲ್ಡ್ ಕೋಸ್ಟ್‌: ಕ್ರೀಡಾಕೂಟದ ಕೊನೆಯ ದಿನವಾದ ಭಾನುವಾರ ಪುರುಷರ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಕಾಟ್ಲೆಂಡ್‌ನ ಕ್ಯಾಲಮ್ ಹಾಕಿನ್ಸ್‌ ಕುಸಿದು ಬಿದ್ದರು.

ಗುರಿ ತಲುಪಲು ಎರಡು ಕಿಲೋಮೀಟರ್ ಬಾಕಿ ಇರುವಾಗ ಹಾಕಿನ್ಸ್ ಕುಸಿದು ಬಿದ್ದರು. ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಬಿಟ್ಟು ಬಿದ್ದ ಚಿತ್ರಗಳನ್ನು ಕ್ಲಿಕ್ಕಿಸಲು ಮುಂದಾದ ಕೆಲವರ  ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಹಾಕಿನ್ಸ್ ಬಿದ್ದು ಒದ್ದಾಡುತ್ತಿದ್ದಾಗ ಅವರ ಬಳಿಯಿಂದಲೇ ಆಸ್ಟ್ರೇಲಿಯಾದ ಮಿಷೆಲ್ ಶೆಲ್ಲಿ ಮುಂದೆ ಸಾಗಿದರು.

30 ಡಿಗ್ರಿ ಸೆಲ್ಶಿಯಸ್‌ನಷ್ಟಿದ್ದ ತಾಪಮಾನದಲ್ಲಿ ಓಡಿದ ಹಾಕಿನ್ಸ್‌ ಏದುಸಿರು ಬಿಡುತ್ತ ಸಾಗಿ ಎರಡು ಬಾರಿ ಬಿದ್ದರು.

ಎರಡನೇ ಬಾರಿ ಅವರು ಅಂಗಾತ ಮಲಗಿದಾಗ ಆತಂಕ ಸೃಷ್ಟಿಯಾಯಿತು. ಕೆಲ ಕಾಲದ ನಂತರ ವೈದ್ಯಕೀಯ ನೆರವು ನೀಡಲಾಯಿತು.

‘ಹಾಕಿನ್ಸ್‌ ಅವರಂಥ ಕ್ರೀಡಾಪಟು ಕುಸಿದು ಬಿದ್ದದ್ದು ಬೇಸರದ ವಿಷಯ. ಅವರು ಬಿದ್ದಾಗ ಚಿತ್ರಗಳನ್ನು ತೆಗೆಯಲು ಮುಂದಾದವರು ಕ್ರೀಡಾ ಸ್ಫೂರ್ತಿಗೆ ಮತ್ತು ಮಾನವೀಯತೆಗೆ ಧಕ್ಕೆ ತಂದಿದ್ದಾರೆ’ ಎಂದು ಸಂಘಟಕ ಸಮಿತಿಯ ಮುಖ್ಯಸ್ಥ ಮಾರ್ಕ್ ಪೀಟರ್ಸ್ ಹೇಳಿದರು.

ಪ್ರತಿಕ್ರಿಯಿಸಿ (+)