ಸೋಮವಾರ, ಡಿಸೆಂಬರ್ 9, 2019
17 °C

ಗವರ್ನರ್ಸ್‌ ಕಪ್‌: ವಿವೇಕ್‌ ವರ್ಮಾಗೆ ಪ್ರಶಸ್ತಿ

Published:
Updated:
ಗವರ್ನರ್ಸ್‌ ಕಪ್‌: ವಿವೇಕ್‌ ವರ್ಮಾಗೆ ಪ್ರಶಸ್ತಿ

ಬೆಂಗಳೂರು: ಬೆಂಗಳೂರು ಗಾಲ್ಫ್‌ ಕ್ಲಬ್‌ ಆಶ್ರಯದಲ್ಲಿ ನಡೆದ ಗವರ್ನರ್ಸ್‌ ಕಪ್‌–2018 ಟೂರ್ನಿಯ ಪುರುಷರ ಓಪನ್‌ ವಿಭಾಗದಲ್ಲಿ ವಿವೇಕ್‌ ವರ್ಮಾ ಅವರು ಪ್ರಶಸ್ತಿ ಗಳಿಸಿದ್ದಾರೆ.

ಭಾನುವಾರ ನಡೆದ ಫೈನಲ್‌ನಲ್ಲಿ ವಿವೇಕ್‌ ಅವರು 142 ಸ್ಕೋರು ಗಳಿಸಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ರನ್ನರ್‌ ಅಪ್‌ ಸ್ಥಾನ ಪಡೆದ ಡೆವಿಡ್‌ ಡಿಸೋಜಾ ಅವರು 143 ಸ್ಕೋರು ಗಳಿಸಿದರು.

ವಿವಿಧ ವಿಭಾಗಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದವರ ವಿವರ ಇಂತಿದೆ: ಹ್ಯಾಂಡಿಕ್ಯಾಪ್‌ 0–9: ಉತ್ಪಲ್‌ ದೇಸಾಯಿ, ನಿಶಾಂತ್‌ ಕುಲಕರ್ಣಿ (ರನ್ನರ್‌ ಅಪ್‌). ಹ್ಯಾಂಡಿಕ್ಯಾಪ್‌ 10–18: ಗಿರೀಶ್‌ ಋತ್ವಿಕ್‌, ಅಮೀಶ್‌ ಕರೇಕರ್‌ (ರನ್ನರ್‌ ಅಪ್‌). ಹ್ಯಾಂಡಿಕ್ಯಾಪ್‌ 19–24: ಡಾ. ಸೀತಾರಾಮ್‌ ಶೆಟ್ಟಿ, ಸಿದ್ದರಾಮ್‌ ಜಟ್ಟಿ (ರನ್ನರ್‌ ಅಪ್‌).

ಮಹಿಳೆಯರ ವಿಭಾಗ (ಪಶಸ್ತಿ ಗೆದ್ದವರು): ಜಾಸ್ಮಿನ್‌ ಸಚ್‌ದೇವ್‌ ಹಾಗೂ ದೇವಿಕಾ ಕಾಮತ್‌

ಲಾಂಗೆಸ್ಟ್‌ ಡ್ರೈವ್‌: ಅಮಿತಾಬ್‌ ಪೊದ್ದಾರ್‌. ಕ್ಲೋಸೆಸ್ಟ್‌ ಟು ಪಿನ್‌: ಡೆವಿಡ್‌ ಡಿಸೋಜಾ

ಪ್ರಾಯೋಜಕರ ವಿಭಾಗ (ಪಶಸ್ತಿ ಗೆದ್ದವರು): ಸುಧಾಕರ್‌, ಮುರಳಿ

ಪ್ರತಿಕ್ರಿಯಿಸಿ (+)