ಶನಿವಾರ, ಡಿಸೆಂಬರ್ 14, 2019
20 °C

ಕಡಲ್ಗಳ್ಳರ ಸೆರೆಯಲ್ಲಿದ್ದ ಮೂವರು ಯುವಕರು ಭಾರತಕ್ಕೆ ವಾಪಸ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಡಲ್ಗಳ್ಳರ ಸೆರೆಯಲ್ಲಿದ್ದ ಮೂವರು ಯುವಕರು ಭಾರತಕ್ಕೆ ವಾಪಸ್‌

ನವದೆಹಲಿ: 73 ಗಂಟೆಗಳ ಕಾಲ ನೈಜೀರಿಯಾದ ಕಡಲ್ಗಳ್ಳರ ಸರೆಯಿಲ್ಲಿದ್ದು ಬಿಡುಗಡೆಯಾಗಿದ್ದ ಭಾರತದ ಮೂವರು ಯುವಕರು ಭಾನುವಾರ ತಡರಾತ್ರಿ ದೇಶಕ್ಕೆ ಮರಳಿದ್ದಾರೆ.

ನೈಜೀರಿಯಾದ ವ್ಯಾಪಾರಿ ನೌಕಾಪಡೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಸುಶೀಲ್ ಕುಮಾರ್, ಪಂಕಜ್ ಕುಮಾರ್ ಮತ್ತು ಅಜಯ್ ಕುಮಾರ್ ಅವರನ್ನು ಕಡಲ್ಗಳ್ಳರು ಸೆರೆಯಲ್ಲಿರಿಸಿಕೊಂಡಿದ್ದರು.

ಸದ್ಯ ಹಿಮಾಚಲ ಪ್ರದೇಶದ ಪಾಲಂಪೋರ್‌ಗೆ ಮರಳಿರುವ ಅಜಯ್‌ ಕುಮಾರ್‌ ಸೆರೆಯಲ್ಲಿದ್ದ ಮೂರುದಿನಗಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅವರು, ‘ದೇವರು ಮತ್ತು ಸರ್ಕಾರವನ್ನು ನಾನು ನಂಬಿದ್ದೆ. ಅವರು ಒಂದಲ್ಲ ಒಂದು ದಿನ ನಮ್ಮನ್ನು ಬಿಡುಗಡೆಗೊಳಿಸಲಿದ್ದಾರೆ ಎಂಬ ವಿಶ್ವಾಸವಿತ್ತು’ ಎಂದು ಹೇಳಿದ್ದಾರೆ.

http://www.newindianexpress.com/nation/2018/apr/16/three-indians-return-home-after-73-day-captivity-in-nigeria-1802027.html

ಯುವಕರು ಬಿಡುಗಡೆಯಾಗಿರುವ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಏಪ್ರಿಲ್‌ 11ರಂದು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದರು. ಜತೆಗೆ ಯುವಕರ ಬಿಡುಗಡೆಗಾಗಿ ಶ್ರಮಿಸಿದ್ದ ನೈಜೀರಿಯಾದಲ್ಲಿನ ಭಾರತೀಯ ಹೈಕಮಿಷನರ್‌ ಬಿ.ಎನ್‌. ರೆಡ್ಡಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

ಪ್ರತಿಕ್ರಿಯಿಸಿ (+)