ನಲ್ಲಿಯಲ್ಲಿ ಕಲುಷಿತ ನೀರು: ಆಕ್ರೋಶ

7
ಬೈಲಹೊಂಗಲ: ಅಂಬೇಡ್ಕರ್ ಗಲ್ಲಿ ನಿವಾಸಿಗಳ ಪ್ರತಿಭಟನೆ; ತುರ್ತು ಕ್ರಮಕ್ಕೆ ಆಗ್ರಹ

ನಲ್ಲಿಯಲ್ಲಿ ಕಲುಷಿತ ನೀರು: ಆಕ್ರೋಶ

Published:
Updated:

ಬೈಲಹೊಂಗಲ: ಪಟ್ಟಣದ ಪುರಸಭೆ ವಾರ್ಡ್ ನಂ. 19ರ ಅಂಬೇಡ್ಕರ್ ಗಲ್ಲಿಯ ಕುಡಿಯುವ ನೀರಿನ ನಲ್ಲಿಗಳಲ್ಲಿ ಕುಲುಷಿತ ನೀರು ಬರುತ್ತಿರುವುದನ್ನು ಖಂಡಿಸಿ, ಸ್ಥಳೀಯ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ, ಎಂಜಿನಿಯರ್ ವಿರುದ್ಧ ಘೋಷಣೆ ಕೂಗಿದರು.

ವಾರ್ಡ್ ಸದಸ್ಯ ಶಿವಯೋಗಿ ಹುಲ್ಲೆನ್ನವರ ಮಾತನಾಡಿ, ‘ಗಟಾರ, ಒಳಚರಂಡಿಯ ಗಲೀಜು ಪೈಪ್‌ಗಳಲ್ಲಿ ಸೇರಿಕೊಂಡು ಕಲುಷಿತ ನೀರು ಬರುತ್ತಿದೆ. ಇದರಿಂದ ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಈ ಸಮಸ್ಯೆಯನ್ನು ಗಮನಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ತುರ್ತು ಕ್ರಮ ಕೈಕೊಳ್ಳಬೇಕು’ ಎಂದು ಒತ್ತಾಯಿಸಿದರು.

ರಾಘವೇಂದ್ರ ಭರಮನ್ನವರ ಮಾತನಾಡಿ, ‘ಕಳೆದ ಎರಡು ತಿಂಗಳಿನಿಂದ ಈ ಭಾಗಕ್ಕೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಈ ಕುರಿತು ವಾರ್ಡ್ ಸದಸ್ಯರ ಮೂಲಕ ಪುರಸಭೆ ಅಧ್ಯಕ್ಷ, ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಕಲುಷಿತ ನೀರೇ ನಮಗೆ ಗತಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಂಡಲೀಕ ಮುರಗೋಡ, ಶಿವಪ್ಪ ಭರಮನ್ನವರ, ಅಕ್ಕವ್ವ ಮುರಗೋಡ, ಸಂಗೀತಾ ಭರಮನ್ನವರ, ಸಹನಾ ಹುಲ್ಲೆನ್ನವರ, ಜಾನವ್ವ ಕಾಳೆ, ಐಶರ್ಯ ಕಾಳೆ, ಗಿರಿಜವ್ವ ದೊಡಮನಿ ಈ ಸಂದರ್ಭದಲ್ಲಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry