ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನಮಾನ ಆಗ್ರಹಿಸಿ ಆಂಧ್ರ ಪ್ರದೇಶ ಬಂದ್‌: ಗಡಿ ಭಾಗದವರೆಗೆ ಮಾತ್ರ ಕೆಎಸ್ಆರ್‌ಟಿಸಿ ಸಂಚಾರ

Last Updated 16 ಏಪ್ರಿಲ್ 2018, 6:15 IST
ಅಕ್ಷರ ಗಾತ್ರ

ಅಮರಾವತಿ: ರಾಜ್ಯಕ್ಕೆ ವಿಶೇಷ ದರ್ಜೆ ಸ್ಥಾನ ನೀಡಲು ಆಗ್ರಹಿಸಿ ಸೋಮವಾರ ಆಂಧ್ರ ಪ್ರದೇಶ ಬಂದ್‌ಗೆ ಕರೆ ನೀಡಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಆಂಧ್ರ ಪ್ರದೇಶದ ಗಡಿ ಭಾಗದ ವರೆಗೆ ಮಾತ್ರ ಸಂಚರಿಸುತ್ತಿವೆ.

ಆಂಧ್ರ ಪ್ರದೇಶ ಪ್ರತ್ಯೇಕ ಹೂಡಾ ಸಾಧನಾ ಸಮಿತಿ ಬಂದ್‌ ಆಚರಿಸುತ್ತಿದೆ. ವಿರೋಧ ಪಕ್ಷಗಳಾದ ವೈಎಸ್‌ಆರ್‌ ಕಾಂಗ್ರೆಸ್‌, ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳು ಬಂದ್‌ಗೆ ಬೆಂಬಲ ನೀಡಿವೆ. ಆದರೆ, ಆಡಳಿತ ಪಕ್ಷ ತೆಲುಗು ದೇಶಂ ಪಾರ್ಟಿ ಬಂದ್‌ ವಿರೋಧಿಸಿದೆ.

ಆಂಧ್ರ ಪ್ರದೇಶದ ಸಾರಿಗೆ ಸಂಸ್ಥೆ ಬಸ್‌ಗಳು ಬಹುತೇಕ ಸ್ಥಗಿತಿಗೊಂಡಿವೆ. ಕರ್ನಾಟಕದಿಂದ ತೆರಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬಂದ್‌ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಗಡಿ ಭಾಗದವರೆಗೆ ಸಂಚಾರ ಸೀಮಿತಗೊಳಿಸಿವೆ.

ತಿರುಪತಿಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿರುವುದು ವರದಿಯಾಗಿದೆ. ವೈಝಾಗ್‌ ಸೇರಿ ಹಲವು ಕಡೆ ಸಾರಿಗೆ ಸಂಸ್ಥೆ ಬಸ್‌ಗಳು ಡಿಪೋದಿಂದ ಸಂಚರಿಸಿಲ್ಲ. ವಿಜಯವಾಡದಲ್ಲಿ ವಿದ್ಯಾರ್ಥಿಗಳು ಸಂಘಟನೆ ಹಾಗೂ ಜವಳಿ ಮಾರುಕಟ್ಟೆ ನೌಕರರು ಮತ್ತು ಡೀಲರ್‌ಗಳು ಬಂದ್‌ಗೆ ಬೆಂಬಲಿಸಿದ್ದಾರೆ.

ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದು, ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಕೇಂದ್ರದ ಅಸಹಕಾರವನ್ನು ವಿರೋಧಿಸಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ಹುಟ್ಟಿದ ದಿನವಾದ ಏ.20ರಂದು ಉಪವಾಸ ನಡೆಸಿ ಪ್ರತಿಭಟಿಸುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT