ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಿತ್ತೆಸೆಯಿರಿ

ಕುಡಿತಿನಿ ಗ್ರಾಮದಲ್ಲಿ ಮಹಾಮೈತ್ರಿ ಮುಖಂಡ ಎಸ್.ಆರ್.ಹಿರೇಮಠ ಮನವಿ
Last Updated 16 ಏಪ್ರಿಲ್ 2018, 6:12 IST
ಅಕ್ಷರ ಗಾತ್ರ

ಬಳ್ಳಾರಿ: ‘ ಜನಾಂದೋಲನ ಮಹಾಮೈತ್ರಿಯಿಂದ 21 ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ’ ಎಂದು ಮಹಾಮೈತ್ರಿ ಮುಖಂಡ ಎಸ್.ಆರ್.ಹಿರೇಮಠ ತಿಳಿಸಿದರು.

ತಾಲ್ಲೂಕಿನ ಕುಡಿತಿನಿ ಪಟ್ಟಣದ ತೇರುಬೀದಿಯಲ್ಲಿ ಶನಿವಾರ ಜನಾಂದೋಲನ ಮಹಾಮೈತ್ರಿ ಬೆಂಬಲಿತ ಎಸ್.ಯು.ಸಿ.ಐ ಕಮ್ಯುನಿಸ್ಟ್ ಅಭ್ಯರ್ಥಿ ರಾಮಾಂಜನಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಕರ್ನಾಟಕದ ರಾಜಕೀಯದಲ್ಲಿ ಈಗ ಹೊಸ ಅರುಣೋದಯ ಸೃಷ್ಟಿಯಾಗುತ್ತಿದೆ. ಈಗ ಇರುವ ಪಕ್ಷಗಳ ದುಷ್ಟ, ಜನವಿರೋಧಿ ಮಟ್ಟ ಹಾಕಲು ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳು, ಜನಪರ ಹೋರಾಟದಲ್ಲಿರುವ ರಾಜಕೀಯ ಪಕ್ಷಗಳು ಒಟ್ಟುಗೂಡಿ ಜನಾಂದೋಲನಗಳ ಮಹಾಮೈತ್ರಿಯನ್ನು ಹುಟ್ಟು ಹಾಕಲಾಗಿದೆ’ ಎಂದರು.

‘ಈ ಭಾಗದ ಸಮಸ್ಯೆ ಕುರಿತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕನಿಷ್ಠ ಪಕ್ಷ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ. ಇಲ್ಲಿನ ಕಾರ್ಖಾನೆಗಳು ಹೊರ ಸೂಸುವ ಧೂಳಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಜಿಂದಾಲ್ ಕಾರ್ಖಾನೆ ಬಿಡುವ ತ್ಯಾಜ್ಯದಿಂದ ಕೆರೆಗಳು ಮಾಲಿನ್ಯವಾಗುತ್ತಿವೆ’ ಎಂದು ಆರೋಪಿಸಿದರು.

‘ಅಕ್ರಮ ಗಣಿಗಾರಿಕೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಮುಚೆ ಗುಡುಗಿದ್ದರು. ಆದರೆ, ಈಗ ಅಕ್ರಮ ಗಣಿಗಾರಿಕೆಯಿಂದ ಜೈಲು ಸೇರಿದ ಆನಂದ್ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಅಲ್ಲದೇ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಒಳಗೊಂಡಂತೆ ಇತರೆ ನಾಯಕರು ಜೈಲಿಗೆ ಹೋಗಿ ಬಂದವರು’ ಎಂದು ಆರೋಪಿಸಿದರು.

‘ಈ ಮೂರು ಪಕ್ಷಗಳಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ. ಇಂತಹ ಜೆಸಿಬಿ ಪಕ್ಷಗಳನ್ನು ಜನತೆ ಕಿತ್ತು ಎಸೆಯಬೇಕು. ಹೋರಾಟದ ಹಿನ್ನಲೆಯಿರುವ ಅಭ್ಯರ್ಥಿ ರಾಮಾಂಜನಪ್ಪ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ರಾಘವೇಂದ್ರ ಕುಷ್ಟಗಿ ಮಾತಾನಾಡಿ, ‘ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವ ಭರವಸೆಗಳನ್ನು ಈಡೇರಿಸಲಿಲ್ಲ. ಕಪ್ಪು ಹಣ ತರಲಿಲ್ಲ, ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡಲಿಲ್ಲ. ಅಗತ್ಯ ವಸ್ತುಗಳ ಬೆಲೆಗಳನ್ನು ದರವನ್ನು ಕಡಿಮೆ ಮಾಡಲಿಲ್ಲ. ಕೇವಲ ವಿಜಯ್ ಮಲ್ಯ, ನೀರವ್ ಮೋದಿ, ಅಂಬಾನಿ, ಅದಾನಿಗಳು ಅಂತವರು ಮೋದಿ ಆಡಳಿತದಲ್ಲಿ ಉದ್ಧಾರ ಆಗಿದ್ದಾರೆ ಹೊರತು ಜನಸಾಮಾನ್ಯರಲ್ಲ’ ಎಂದು ಟೀಕಿಸಿದರು.

ಅಭ್ಯರ್ಥಿ ರಾಮಾಂಜನಪ್ಪ ಮಾತನಾಡಿದರು. ಇದಕ್ಕೂ ಮುನ್ನ ಮುಖಂಡರು ಯಶವಂತನಗರ, ಭುಜಂಗನಗರ, ಕೃಷ್ಣಾನಗರ, ತಾರಾನಗರ, ಒಡ್ಡು ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದರು. ಮಖಂಡರಾದ ಪೂಜಾರ್, ಶ್ರೀಶೈಲ, ಸೋಮಶೇಖರ್, ಡಾ.ಪ್ರಮೋದ್, ಚಂದ್ರಶೇಖರ್ ಮೇಟಿ, ಮಂಜುಳಾ, ರಾಧಾಕೃಷ್ಣ ಉಪಾಧ್ಯ ಇದ್ದರು.

**

ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿದ್ದಾರೆ – ಎಸ್‌.ಆರ್.ಹಿರೇಮಠ, ಮಹಾಮೈತ್ರಿ ಆಂದೋಲನದ ಮುಖಂಡ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT