ಶಾಸಕರಾದ ರಾಜೇಶ್, ಶಿವಮೂರ್ತಿಗೆ ಕೊಕ್‌

7
ಶಾಮನೂರು ಸೇರಿ ಐವರು ಶಾಸಕರಿಗೆ ಟಿಕೆಟ್‌: ಜಗಳೂರಿನಿಂದ ಪುಷ್ಪಾಗೆ ಅವಕಾಶ

ಶಾಸಕರಾದ ರಾಜೇಶ್, ಶಿವಮೂರ್ತಿಗೆ ಕೊಕ್‌

Published:
Updated:

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು, ಜಗಳೂರು ಶಾಸಕ ರಾಜೇಶ್‌ ಹಾಗೂ ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಐವರು ಹಾಲಿ ಶಾಸಕರಿಗೆ ಟಿಕೆಟ್‌: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ದಿಂದ ಶಾಮನೂರು ಶಿವಶಂಕರಪ್ಪ, ಉತ್ತರ ವಿಧಾನಸಭಾ ಕ್ಷೇತ್ರದಿಂದ ಎಸ್‌.ಎಸ್‌. ಮಲ್ಲಿಕಾರ್ಜುನ, ಚನ್ನಗಿರಿ ಕ್ಷೇತ್ರದಿಂದ ವಡ್ನಾಳ್‌ ರಾಜಣ್ಣ, ಹೊನ್ನಾಳಿ ಕ್ಷೇತ್ರದಿಂದ ಡಿ.ಜಿ. ಶಾಂತನಗೌಡ, ಹರಪನಹಳ್ಳಿ ಕ್ಷೇತ್ರದಿಂದ ಎಂ.ಪಿ. ರವೀಂದ್ರ ಅವರಿಗೆ ಟಿಕೆಟ್‌ ನೀಡಲಾಗಿದೆ. ಹರಿಹರ ಕ್ಷೇತ್ರದಿಂದ ಹಿರಿಯ ಮುಖಂಡ ಎಸ್‌. ರಾಮಪ್ಪ ಅವರಿಗೂ ಟಿಕೆಟ್‌ ಸಿಕ್ಕಿದೆ.

ಪ್ರತಿಭಟನೆ: ಜಗಳೂರು ಕ್ಷೇತ್ರದಿಂದ ಶಾಸಕ ಎಚ್‌.ಪಿ.ರಾಜೇಶ್‌ಗೆ ಟಿಕೆಟ್‌ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry