ಭಾನುವಾರ, ಡಿಸೆಂಬರ್ 15, 2019
25 °C

ಮುಖಂಡರ ಕಾಲು ಹಿಡಿದರೂ ಟಿಕೆಟ್ ಸಿಗಲಿಲ್ಲ: ಕಣ್ಣೀರಿಟ್ಟ ಪ್ರಕಾಶಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖಂಡರ ಕಾಲು ಹಿಡಿದರೂ ಟಿಕೆಟ್ ಸಿಗಲಿಲ್ಲ: ಕಣ್ಣೀರಿಟ್ಟ ಪ್ರಕಾಶಂ

ದೆಹಲಿ: ‘ಎಲ್ಲ ಮುಖಂಡರ ಕಾಲು ಹಿಡಿದರೂ ಟಿಕೆಟ್ ಸಿಗಲಿಲ್ಲ. ಪಕ್ಷದಲ್ಲಿ ಅಸಂಘಟಿತ ಕಾರ್ಮಿಕರ ಪರ 40 ವರ್ಷ ಸೇವೆ ಸಲ್ಲಿಸಿದರೂ ನನಗೆ ಬೆಂಗಳೂರಿನ ರಾಜಾಜಿನಗರ, ಶಾಂತಿನಗರ ಟಿಕೆಟ್ ನೀಡಲಿಲ್ಲ ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್. ಪ್ರಕಾಶಂ ಕಣ್ಣೀರು ಸುರಿಸಿದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶಂ ಕಣ್ಣೀರಿಟ್ಟರು.

‌ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಬೆಂಬಲಿಗನಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದರೂ ತನ್ನನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಭಾನುವಾರ 218 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಸೋಮವಾರ ರಾಜ್ಯದ ವಿವಿಧ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳು ಅಸಮಾಧಾನ ಹೊರಹಾಕಿದ್ದಾರೆ. ಹಲವು ಭಾಗಗಳಲ್ಲಿ ಟಿಕೆಟ್‌ ವಂಚಿತರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
 

ಪ್ರತಿಕ್ರಿಯಿಸಿ (+)