ಶನಿವಾರ, ಡಿಸೆಂಬರ್ 14, 2019
20 °C

ಜೆಡಿಯು: 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಯು: 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು: ಜೆಡಿಯು 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ.ಪಟೇಲ್ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಅರುಣಕುಮಾರ ಸಿ.ಪಾಟೀಲ- ಆಳಂದ, ಹಜರತ್ ಅಲಿ ಶೇಖ್- ಕುಂಗೋಳ, ಟಪಾಲ್ ಗಣೇಶ್- ಬಳ್ಳಾರಿ ನಗರ, ಜಿ.ಎನ್.ತೋಟದ್- ನವಲಗುಂದ, ಡಿ.ಕೆ.ಹಿತ್ತಲಮನಿ- ರಾಣೆಬೆನ್ನೂರು, ವಿಜಯೇಂದ್ರ ರೆಡ್ಡಿ- ಚಿಕ್ಕನಾಯಕನಹಳ್ಳಿ, ಬಿ.ರಾಮಯ್ಯ- ನೆಲಮಂಗಲ, ರಾಜು ನಾಯಕ ವಾಡಿ- ಹುಬ್ಬಳ್ಳಿ ಸೆಂಟ್ರಲ್, ರಾಜೀವ್ ಕೋಟ್ಯಾನ್, ಪುರುಷೋತ್ತಮ ಎಸ್- ದೊಡ್ಡಬಳ್ಳಾಪುರ, ದೊಡ್ಡ ಮಾಲಿ.ಪಾಟೀಲ್- ಗುರುಮಿಠಕಲ್, ಎಸ್.ಎಸ್.ರಡ್ಡೇರ- ಗದಗ, ಎಚ್.ರಾಮಚಂದ್ರಪ್ಪ- ಹೊಳಲ್ಕೆರೆ ಮತ್ತು ಜಿ.ಈಶಪ್ಪ-ಕೂಡ್ಲಗಿ.

ಇನ್ನೊಂದು ಪಟ್ಟಿ ಇದೇ 22ರಂದು ಬಿಡುಗಡೆ ಆಗಲಿದೆ. ಎರಡನೇ ಪಟ್ಟಿಯಲ್ಲಿ 20ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಇರಲಿದೆ ಎಂದು ಮಹಿಮ ಪಟೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)