ಭಾನುವಾರ, ಡಿಸೆಂಬರ್ 8, 2019
25 °C

‘ಟಿ–ಶರ್ಟ್‌ಗಳೇ ಕಂಫರ್ಟ್’

Published:
Updated:
‘ಟಿ–ಶರ್ಟ್‌ಗಳೇ ಕಂಫರ್ಟ್’

ಟೀ–ಶರ್ಟ್‌ಗಳು ಎಂದರೆ ಬೋರಿಂಗ್ ಡ್ರೆಸ್‌ಗಳು, ಎಲ್ಲ ಸಂದರ್ಭಕ್ಕೂ ಒಗ್ಗುವುದಿಲ್ಲ ಎನ್ನುವುದು ಅನೇಕರ ಅಂಬೋಣ. ಆದರೆ ಈ ಟೀ–ಶರ್ಟ್‌ಗಳನ್ನೇ ವಿಭಿನ್ನವಾಗಿ ಧರಿಸುವ ಮೂಲಕ ಟ್ರೆಂಡ್ ಸೃಷ್ಟಿಸಿದವರು ಬಾಲಿವುಡ್‌ನ ಸ್ಟೈಲ್‌ ಕ್ವೀನ್ ಕರೀನಾ ಕಪೂರ್‌.

ಧರಿಸಲು ಕಂಫರ್ಟ್ ಎನ್ನಿಸುವ ಮತ್ತು ಆಕರ್ಷಕ ಸ್ಲೋಗನ್‌ಗಳನ್ನು ಹೊಂದಿರುವ ಟೀ–ಶರ್ಟ್‌ ಧರಿಸಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹರಿ ಬಿಟ್ಟಿದ್ದಾರೆ ಈ ಸುಂದರಿ.

ಜೀನ್ಸ್ ಇಂದಿನ ಹೆಂಗಳೆಯರ ನೆಚ್ಚಿನ ದಿರಿಸು. ಶಾಪಿಂಗ್, ಆಫೀಸ್‌, ಪಾರ್ಟಿಗಳಿಗೂ ಇದು ಸಲ್ಲುತ್ತದೆ. ‘ಜೀನ್ಸ್‌ ಸುಲಭವಾಗಿ ಧರಿಸಿಬಹುದು. ಇದು ಎಲ್ಲ ಕಾಲಕ್ಕೂ ಸಲ್ಲುತ್ತದೆ’ ಎನ್ನುವುದು ಕರೀನಾ ಕಂಡುಕೊಂಡಿರುವ ಸತ್ಯ. ಸಾಮಾನ್ಯವಾಗಿ ಮೊದಲೆಲ್ಲಾ ಜೀನ್ಸ್ ಮೇಲೆ ಟೀ–ಶರ್ಟ್‌ಗಳನ್ನಷ್ಟೇ ಧರಿಸುತ್ತಿದ್ದರು. ಈಗ ಜೀನ್ಸ್ ಮೇಲೆ ಧರಿಸಲು ಬಗೆಬಗೆ ಟಾಪ್‌ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಇಂದಿಗೂ ಟೀ–ಶರ್ಟ್‌ಗಳೇ ನನ್ನ ನೆಚ್ಚಿನ ಆಯ್ಕೆ ಎನ್ನುತ್ತಾರೆ ಬೆಬೋ.

ತಮ್ಮ ಬಾಣಂತಿ ದಿನಗಳ ನಂತರ ಅಚ್ಚರಿ ಎನಿಸುವಷ್ಟು ತೆಳ್ಳಗಾಗಿರುವ ಕರೀನಾ ಬಾಲಿವುಡ್‌ನ ವಂಡರ್ ವುಮನ್ ಎನ್ನಿಸಿಕೊಂಡಿದ್ದಾರೆ. ‘ವಂಡರ್ ವುಮನ್‌, ಸೆಕ್ಸಿ ಇನ್ ಬ್ಲ್ಯಾಕ್‌, ಇಫ್ ಯು ವಾಂಟ್‌ ಟು ಟಾಕ್‌ ಟು ಮಿ ಟಾಕ್ ಟು ಮೈ ಏಜೆನ್ಸಿ’ ಮುಂತಾದ ಸ್ಲೋಗನ್‌ಗಳು ಇರುವ ಟಿ–ಶರ್ಟ್‌ಗಳಲ್ಲಿ ಮಿಂಚಿದ್ದಾರೆ. ‘ಟಿ–ಶರ್ಟ್‌ಗಳೇ ನನಗೆ ಕಂಪರ್ಟ್’ ಎಂದೂ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)