ರಂಗಾಯಣ ರಘು ಹುಟ್ಟುಹಬ್ಬ

7

ರಂಗಾಯಣ ರಘು ಹುಟ್ಟುಹಬ್ಬ

Published:
Updated:
ರಂಗಾಯಣ ರಘು ಹುಟ್ಟುಹಬ್ಬ

ರಂಗಾಯಣ ರಘು ಎಂದೇ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಇವರ ಪೂರ್ಣ ಹೆಸರು ಕೊಟ್ಟೂರು ಚಿಕ್ಕರಂಗಪ್ಪ ರಘುನಾಥ್ (ಜನನ 17ನೇ ಏಪ್ರಿಲ್, 1965). ಖಳನಾಯಕ, ಹಾಸ್ಯ, ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ರಂಗಾಯಣ ರಘು ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಪ್ರಾಥಮಿಕ ಶಿಕ್ಷಣ ಮುಗಿಸಿ, ಇವರು ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ತರಬೇತಿಗೆ ಸೇರಿಕೊಂಡರು. 1995ರಲ್ಲಿ ‘ಸುಗ್ಗಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

‘ದುನಿಯಾ’ ಸಿನಿಮಾದಲ್ಲಿನ ಪೋಷಕ ಪಾತ್ರ ರಂಗಾಯಣ ರಘು ಅವರಿಗೆ ಯಶಸ್ಸು ತಂದುಕೊಟ್ಟಿತು. ಈವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯವರಾದ ರಂಗಾಯಣ ರಘು ಹಾಗೂ ಅವರ ಪತ್ನಿ ಎನ್‌. ಮಂಗಳಾ ಅವರು ರಂಗಭೂಮಿ ತಂಡ ಸಂಚಾರಿ ಥಿಯೇಟರ್‌ ಅನ್ನು ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry