ಅತ್ಯಾಚಾರ ಖಂಡಿಸಿ ಮೊಂಬತ್ತಿ ಮೆರವಣಿಗೆ

7

ಅತ್ಯಾಚಾರ ಖಂಡಿಸಿ ಮೊಂಬತ್ತಿ ಮೆರವಣಿಗೆ

Published:
Updated:
ಅತ್ಯಾಚಾರ ಖಂಡಿಸಿ ಮೊಂಬತ್ತಿ ಮೆರವಣಿಗೆ

ಸಿಂಧನೂರು: ಉನ್ನಾವ್ ಮತ್ತು ಕಠುವಾದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ  ಯುವಕರು ಶನಿವಾರ ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಕುರಿ ಮೇಯಿಸಲು ಹೋಗಿದ್ದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದು ಅತ್ಯಂತ ಹೇಯ ಕೃತ್ಯ.ಆರೋಪಿಗಳಿಗೆ ಕಠಿಣ ಶಿಕ್ಷೆ

ವಿಧಿಸಬೇಕು ಎಂದು ಯುವಕರು ಆಗ್ರಹಿಸಿದರು.ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಯುವ ಮುಖಂಡರಾದ ನಿಸಾರ್‌ಖಾನ್‌, ಮುರ್ತುಜಾ ಹುಸೇನ್, ಶಫಿ ಉಲ್ಲಾಖಾನ್, ಮುನ್ನಾ, ಅಬ್ದುಲ್ ಕರೀಂ, ನದೀಮುಲ್ಲಾ, ದಾವೂದ್, ಸಲೀಂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry