ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; 82 ಜನರಿಗೆ ಟಿಕೆಟ್‌

ಭಾನುವಾರ, ಮಾರ್ಚ್ 24, 2019
33 °C

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; 82 ಜನರಿಗೆ ಟಿಕೆಟ್‌

Published:
Updated:
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; 82 ಜನರಿಗೆ ಟಿಕೆಟ್‌

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸೋಮವಾರ ಬಿಡುಗಡೆ ಮಾಡಿದೆ.

ಎರಡನೇ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿರುವ 82 ಅಭ್ಯರ್ಥಿಗಳ ಹೆಸರಿದೆ.

ಕಳೆದ ಭಾನುವಾರ ತಡರಾತ್ರಿ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಎರಡೂ ಪಟ್ಟಿ ಸೇರಿ ಒಟ್ಟು 154 ಅಭ್ಯರ್ಥಿಗಳ ಹೆಸರು ಅಂತಿಮಗೊಂಡತಾಗಿದ್ದು, ಮತ್ತೊಂದು ಪಟ್ಟಿ ಬಿಡುಗಡೆಯನ್ನು ಬಿಜೆಪಿ ಕಾಯ್ದಿರಿಸಿದೆ.

ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು, ಸಾಗರ– ಹರತಾಳು ಹಾಲಪ್ಪ, ಸೊರಬ–ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿ– ಅರಗ ಜ್ಞಾನೇಂದ್ರ, ಹೊನ್ನಾಳಿ– ಎಂ.ಪಿ.ರೇಣುಕಾಚಾರ್ಯ, ಶಾಂತಿ ನಗರ– ವಾಸುದೇವ ಮೂರ್ತಿ, ಬಳ್ಳಾರಿ– ಸಣ್ಣ ಫಕೀರಪ್ಪ, ತುರುವೇಕೆರೆ–ಮಸಾಲೆ ಜಯರಾಂ ಸೇರಿ ಮುಂತಾದವರ ಹೆಸರು ಎರಡನೇ ಪಟ್ಟಿಯಲ್ಲಿದೆ.

ಮೊದಲ ಪಟ್ಟಿಯಲ್ಲಿ ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಪರಿಷತ್‌ ಸದಸ್ಯರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವು ಪ್ರಮುಖ ನಾಯಕರು ಟಿಕೆಟ್‌ ಗಿಟ್ಟಿಸಿದ್ದರು.

ಇನ್ನಷ್ಟು: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry