‘ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಅಂಚಿನಲ್ಲಿ’

7
ಡಾ.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿಯಿಂದ ಕಾರ್ಯಕ್ರಮ

‘ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಅಂಚಿನಲ್ಲಿ’

Published:
Updated:
‘ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಅಂಚಿನಲ್ಲಿ’

ಶಹಾಪುರ: ‘ಸಂಕುಚಿತ ಭಾವನೆಗಳು ಮನಸ್ಸಿನಲ್ಲಿ ಮೂಡುತ್ತಿವೆ. ಸ್ವಾರ್ಥ ಮತ್ತು ದುರಾಸೆಯಿಂದ  ಪ್ರಜಾಪ್ರಭುತ್ವದ ವ್ಯವಸ್ಥೆ ಅಪಾಯದ ಅಂಚಿಗೆ ತಲುಪಿದೆ. ಸಂವಿಧಾನ ಬದಲಾವಣೆಯ ಹುನ್ನಾರಕ್ಕೆ ಮನುವಾದಿಗಳು ಸಜ್ಜಾಗುತ್ತಿದ್ದಾರೆ. ಜಾಗೃತ ಮನಸ್ಸುಗಳು ಎಚ್ಚರಗೊಳ್ಳಬೇಕು’ ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಅಧ್ಯಕ್ಷ ಸಿದ್ದರಾಮ ಬೆಲ್ದಾಳ ತಿಳಿಸಿದರು.

ಸಿಪಿಎಸ್ ಶಾಲಾ ಮೈದಾನದಲ್ಲಿ ಶನಿವಾರ ನಡೆದ  ಡಾ. ಬಿ.ಆರ್‌.ಅಂಬೇಡ್ಕರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸುಭಧ್ರ ರಾಷ್ಟ್ರ ನಿರ್ಮಾಣಕ್ಕೆ ಡಾ.ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಮತದಾನದ ಹಕ್ಕು ನೀಡಿದ್ದಾರೆ. ನಿಮ್ಮ ಅಮೂಲ್ಯವಾದ ಮತವನ್ನು ಹರಿಕೆಯ ಹಕ್ಕು ಮಾಡಿಕೊಳ್ಳದೆ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕನಿಗೆ ನೀಡಬೇಕು’ ಎಂದರು.

‘ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳ್ಳಬಾರದು. ಇಡೀ ಮನುಕುಲದ ಉದ್ದಾರಕ್ಕಾಗಿ ಅವತರಿಸಿ ಬಂದವರು. ಜಾತಿ ವ್ಯವಸ್ಥೆಯಿಂದ ವ್ಯಕ್ತಿಯನ್ನು ಮತ್ತಷ್ಟು ಸಂಕುಚಿತರನ್ನಾಗಿ ಮಾಡುವುದು ಬೇಡ. ಅಂತರಿಕ ಮನಸ್ಸುಗಳು ಮಲಿನಗೊಳ್ಳುವುದು ನಿಲ್ಲಲಿ’ ಎಂದರು.

ಗುರುಮಠಕಲ್ ಖಾಸಾಮಠದ ಮುರುಘಾರಾಜೇಂದ್ರ ಮಹಾಸ್ವಾಮಿ ಮಾತನಾಡಿ, ‘ಶೋಷಿತ ಸಮುದಾಯದಲ್ಲಿ ಮೊದಲು ಅಕ್ಷರ ಕ್ರಾಂತಿ ನಡೆಯಬೇಕು. ಸಮಾಜ ಹಾಗೂ ವ್ಯಕ್ತಿ ಬದಲಾವಣೆಗೆ ಶಿಕ್ಷಣ ದಿಕ್ಸೂಚಿಯಾಗಬಲ್ಲದು. ನ್ಯಾಯಸಮ್ಮತ ಬೇಡಿಕೆ ಹಾಗೂ ಹಕ್ಕುಗಳನ್ನು ಪಡೆಯಲು ನಾವು ಯಾವುದೇ ಸಂಕೋಚವಿಲ್ಲದೆ ಹೋರಾಟದ ಮುನ್ನೆಲೆಗೆ ಬರಬೇಕು. ಶೋಷಿಣೆಯ ಹಾಗೂ ಅನ್ಯಾಯದ ವಿರುದ್ಧ ನಮ್ಮ ಶಕ್ತಿಯು ಸದಾ ಪ್ರತಿಭಟನೆಗೆ ಸಜ್ಜಾಗಿರಬೇಕು’ ಎಂದರು.ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ.ಚಂದ್ರಶೇಖರ ದೊಡ್ಮನಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಜೆಡಿಎಸ್ ನಿಯೋಜಿತ ಅಭ್ಯರ್ಥಿ ಅಮೀನರಡ್ಡಿ ಯಾಳಗಿ,ಅಯ್ಯಣ್ಣ ಕನ್ಯಾಕೊಳ್ಳೂರ, ವಿಶ್ವರಾಧ್ಯ ಸತ್ಯಂಪೇಟೆ, ನೀಲಕಂಠ ಬಡಿಗೇರ,ಗಿರೆಪ್ಪಗೌಡ ಬಾಣಿತಿಹಾಳ,ಸಯ್ಯದ ಇಬ್ರಾಹಿಂ ಶಿರವಾಳ, ಚಂದಪ್ಪ ಸೀತ್ನಿ, ಮಾನಪ್ಪ ಹುಲಸೂರು, ಪರಶುರಾಮ ಕುರಕುಂದಿ, ಚಂದ್ರು ಚಕ್ರವರ್ತಿ,ಭೀಮರಾಯ ತಳವಾರ, ಅಶೋಕ ದಿಗ್ಗಿಬೇಸ್, ಶಿವಕುಮಾರ ತಳವಾರ, ದೇವಿಂದ್ರ ಗೌಡೂರ, ಶಂಕರ ಸಿಂಘೆ, ಚಿದಾನಂದ ಬಡಿಗೇರ, ಗುರು ಬಾಣತಿಹಾಳ, ಗ್ಯಾನಪ್ಪ ಅಣಬಿ, ಮರೆಪ್ಪ ಗೋನಾಲ, ಹೊನ್ನಪ್ಪ ರಸ್ತಾಪುರ, ರಾಮಣ್ಣ ಸಾದ್ಯಾಪೂರ, ಯಲ್ಲಪ್ಪ ದೊಡ್ಮನಿ,ನಿಜಗುಣ ದೋರನಹಳ್ಳಿ ಇದ್ದರು.

**

ಶೋಷಿತ ಸಮುದಾಯದಲ್ಲಿ ಅಕ್ಷರ ಕ್ರಾಂತಿ ನಡೆಯಲಿ. ಶಿಕ್ಷಣ ನಮ್ಮೆಲ್ಲರ ಸಮಸ್ಯೆ ಹಾಗೂ ಸವಾಲುಗಳಿಗೆ ಉತ್ತರವಾಗಬಲ್ಲದು – ಮುರಘರಾಜೇಂದ್ರ ಸ್ವಾಮೀಜಿ, ಶಾಖಾಮಠ ಗುರುಮಠಕಲ್.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry