ಚಿಕ್ಕೋಡಿ–ಸದಲಗಾ, ನಿಪ್ಪಾಣಿ ಕ್ಷೇತ್ರಗಳಿಗೆ ಪತಿ-ಪತ್ನಿಗೆ ಬಿಜೆಪಿ ಟಿಕೆಟ್

ಮಂಗಳವಾರ, ಮಾರ್ಚ್ 26, 2019
26 °C

ಚಿಕ್ಕೋಡಿ–ಸದಲಗಾ, ನಿಪ್ಪಾಣಿ ಕ್ಷೇತ್ರಗಳಿಗೆ ಪತಿ-ಪತ್ನಿಗೆ ಬಿಜೆಪಿ ಟಿಕೆಟ್

Published:
Updated:
ಚಿಕ್ಕೋಡಿ–ಸದಲಗಾ, ನಿಪ್ಪಾಣಿ ಕ್ಷೇತ್ರಗಳಿಗೆ ಪತಿ-ಪತ್ನಿಗೆ ಬಿಜೆಪಿ ಟಿಕೆಟ್

ಬೆಳಗಾವಿ: ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಪತ್ನಿ ಶಶಿಕಲಾ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ನಿಪ್ಪಾಣಿಯ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಮೊದಲ ಪಟ್ಟಿಯಲ್ಲಿ ಇದೇ ಕ್ಷೇತ್ರಕ್ಕೆ ಟಿಕಟ್‌ ಲಭಿಸಿತ್ತು. ಎರಡನೇ ಪಟ್ಟಿಯಲ್ಲಿ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಚಿಕ್ಕೋಡಿ–ಸದಲಗಾ ಕ್ಷೇತ್ರಕ್ಕೆ ಟಿಕೆಟ್‌ ನೀಡಲಾಗಿದೆ.

ಅಣ್ಣಾಸಾಹೇಬ ಜೊಲ್ಲೆ ಅವರು 2004ರಲ್ಲಿ ಬಿಜೆಪಿಯಿಂದ ಸದಲಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಎದುರು ಸೋತಿದ್ದರು. ಕ್ಷೇತ್ರ ಪುನರ್‌ವಿಂಗಡಣೆಯ ನಂತರ 2008ರಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಪತ್ನಿ ಶಶಿಕಲಾ ಜೊಲ್ಲೆ ಅವರನ್ನು ಕಣಕ್ಕಿಳಿಸಿದ್ದರು. ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ಅವರ ಎದುರು ಪರಾಭವಗೊಂಡಿದ್ದರು. 2013ರಲ್ಲಿ ಪುನಃ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry