ಆನೇಕಲ್ ಶಾಸಕ ಶಿವಣ್ಣ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿದ್ದರಾಮಯ್ಯ

ಮಂಗಳವಾರ, ಮಾರ್ಚ್ 26, 2019
26 °C

ಆನೇಕಲ್ ಶಾಸಕ ಶಿವಣ್ಣ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿದ್ದರಾಮಯ್ಯ

Published:
Updated:
ಆನೇಕಲ್ ಶಾಸಕ ಶಿವಣ್ಣ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿದ್ದರಾಮಯ್ಯ

ಮೈಸೂರು: ಆನೇಕಲ್ ಶಾಸಕ ಶಿವಣ್ಣ ಅವರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ರಾಜಕೀಯ ಪ್ರೇರಿತ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಡೆದ ದಾಳಿಯನ್ನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಮಾಬಾಯಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಪ್ಪು ಹಣ ಪತ್ತೆ ಹಚ್ಚುವ ಹಾಗೂ ತೆರಿಗೆ ವಂಚನೆ ತಡೆಯುವ ಉದ್ದೇಶದಿಂದ ನಡೆಸುವ ಐಟಿ ದಾಳಿಗೆ ಯಾವುದೇ ಅಭ್ಯಂತರ ಇಲ್ಲ. ಆದರೆ, ಗೆಲ್ಲುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಜಗ್ಗುವುದಿಲ್ಲ ಎಂದು ಹೇಳಿದರು.

ಅಸಾದುದ್ದಿನ್ ಓವೈಸಿ ಜೆಡಿಎಸ್‌ಗೆ ಬೆಂಬಲ ಸೂಚಿಸಿರುವುದು ರಾಜ್ಯ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರದು. ಕರ್ನಾಟಕದಲ್ಲಿ ಅವರ ಪಕ್ಷಕ್ಕೆ ಸಾಮರ್ಥ್ಯ ಕಡಿಮೆ. ಶಕ್ತಿ ಕುಂದಿರುವ ಜೆಡಿಎಸ್ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry