ರಾಜಧಾನಿ ಪಯಣ

7

ರಾಜಧಾನಿ ಪಯಣ

Published:
Updated:

ನನಗೆ ಸುಮಾರು ಒಂಬತ್ತು ವರ್ಷವಿದ್ದಾಗ ಮೊದಲ ಬಾರಿಗೆ ರೈಲಿನಲ್ಲಿ ನವದೆಹಲಿಗೆ ಪಯಣಿಸಿದ್ದೆ. ಸ್ಲೀಪರ್ ಕೋಚ್‌ನಲ್ಲಿ ನನ್ನ ತಂದೆ–ತಾಯಿ ಮತ್ತು ತಂಗಿಯ ಜೊತೆಗೆ ಅತ್ತೆ ಮನೆಗೆ ಹೊರಟಿದ್ದೆ. ಮೊದಮೊದಲು ರೈಲು ನಿಧಾನವಾಗಿ ಚಲಿಸುತ್ತಿದೆ ಅನಿಸುತ್ತಿತ್ತು. ಆದರೆ ಅದು ವೇಗವಾಗಿಯೇ ಹೋಗುತ್ತಿತ್ತು. ರೈಲಿನಲ್ಲಿ ಸಮಯಕ್ಕೆ ತಕ್ಕಂತೆ ಊಟ ಕೊಡುತ್ತಿದ್ದರು. ನಾನು ತಂಗಿಯ ಜೊತೆಗೆ ಅನೇಕ ಆಟಗಳನ್ನು ಆಡುತ್ತಿದ್ದೆ. ಪ್ರಯಾಣ ತುಂಬಾ ಮಜಾ ಅನಿಸಿತು.

ರೈಲಿನಲ್ಲಿ ಪ್ರವಾಸ ಬಲು ಬೋರು ಅಂದುಕೊಂಡಿದ್ದೆ. ಸ್ವಂತ ಅನುಭವ ಆದ ಮೇಲೆ ಅದು ಖುಷಿ ಅಂತ ಕಂಡುಕೊಂಡೆ. ರೈಲಿನೊಳಗೆ ಕುಳಿತವರಿಗೆ ಕಿಟಕಿಯಲ್ಲಿ ಕಾಣುವ ನೋಟ ಮನೋಹರ. ನಾವು ನಿಂತಲ್ಲೇ ನಿಂತಂತೆ, ಗಿಡ–ಮರ, ಸೂರ್ಯ–ಚಂದ್ರರು ಚಲಿಸುತ್ತಿರುವಂತೆ ಭಾಸವಾಗುತ್ತದೆ.

ನಾವು ದೆಹಲಿಯಿಂದ ಜಮ್ಮ ಕಾಶ್ಮೀರ ಮತ್ತು ಪಂಜಾಬ್‌ಗೂ ರೈಲಿನಲ್ಲಿ ಹೋಗಿದ್ದೆವು. ತಿರುಗಿ ಬರುವಾಗಲು ತಂಗಿ ಜೊತೆಗೆ ಸಾಕಷ್ಟು ಆಟ ಆಡಿದೆ. ನನಗೆ ತುಂಬಾ ಖುಷಿಯಾಯಿತು.

ನಿತ್ಯಾ ವೈ., 7ನೇ ತರಗತಿ, ಅಮರಜ್ಯೋತಿ ಪಬ್ಲಿಕ್ ಶಾಲೆ, ಕೆ.ಆರ್.ಪುರಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry