‘ರಂಗಸ್ಥಲಂ ಆಸ್ಕರ್‌ಗೆ ಅರ್ಹ’

ಮಂಗಳವಾರ, ಮಾರ್ಚ್ 26, 2019
27 °C

‘ರಂಗಸ್ಥಲಂ ಆಸ್ಕರ್‌ಗೆ ಅರ್ಹ’

Published:
Updated:
‘ರಂಗಸ್ಥಲಂ ಆಸ್ಕರ್‌ಗೆ ಅರ್ಹ’

‘ತೆಲುಗಿನ ಖ್ಯಾತ ನಟ ರಾಮ್‌ಚರಣ್‌ ನಟಿಸಿರುವ ‘ರಂಗಸ್ಥಲಂ’ ಸಿನಿಮಾ ಅದ್ಭುತವಾಗಿದೆ. ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್ ಮಾಡಬಹುದಾದ ಎಲ್ಲ ಅರ್ಹತೆಗಳನ್ನೂ ಹೊಂದಿದೆ’ ಎಂದು ತೆಲುಗಿನ ಪವರ್‌ಸ್ಟಾರ್ ಪವನ್‌ ಕಲ್ಯಾಣ್‌ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

₹150 ಕೋಟಿ ಆದಾಯ ಪಡೆದಿರುವ ‘ರಂಗಸ್ಥಲಂ’ ಬಾಹುಬಲಿ–1 ಮತ್ತು ಬಾಹುಬಲಿ–2ರ ನಂತರ ಅತಿ ಹೆಚ್ಚು ಆದಾಯಗಳಿಸಿರುವ ಮೂರನೇ ತೆಲುಗು ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಗ್ರಾಮೀಣ ಬದುಕು, ಸೇಡಿನ ಕುರಿತ ಕಥೆಯ ಎಳೆ ಹೊಂದಿರುವ ಈ ಸಿನಿಮಾ ಸುಕುಮಾರ್‌ ನಿರ್ದೇಶನದಲ್ಲಿ ಮೂಡಿಬಂದಿದೆ. ವಿಮರ್ಶಕರು ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇತ್ತೀಚೆಗೆ ಸಿನಿಮಾ ವೀಕ್ಷಿಸಿದ ಪವನ್‌ ಕಲ್ಯಾಣ್‌ ಕೂಡ ತನ್ನ ಸೋದರಳಿಯನ ನಟನೆ ಹಾಗೂ ಇಡೀ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘ಸಿನಿಮಾ ನನ್ನನ್ನೂ ‘ರಂಗಸ್ಥಲಂ’ ಗ್ರಾಮಕ್ಕೂ ಕರೆದೊಯ್ದಿತ್ತು. ಚಿತ್ರವನ್ನು ವಾಸ್ತವಕ್ಕೆ ಸಮೀಪವಿರುವ ಈ ಚಿತ್ರವನ್ನು ಕಮರ್ಷಿಯಲ್‌ ಚಿತ್ರವನ್ನಾಗಿಸುವಲ್ಲಿ ನಿರ್ದೇಶಕ ಸುಕುಮಾರ್‌ ಶ್ರಮ ಸಾಕಷ್ಟು ಇದೆ’ ಎಂದು ಅವರು ಬೆನ್ನು ತಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry