ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಟಿಗೆ ಪೈಪೋಟಿ

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಕಾಂಗ್ರೆಸ್‌ನವರು ಲೂಟಿ ಹೊಡೆದಿದ್ದಾರೆ’ ಎಂದು ಬಿಜೆಪಿ ಹೇಳುತ್ತಿದೆ. ‘ಬಿಜೆಪಿ ಭ್ರಷ್ಟಾಚಾರ ಮಾಡಿತ್ತು’ ಎಂದು ಕಾಂಗ್ರೆಸ್ ಹೇಳುತ್ತಿದೆ. ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್‌ಗಾಗಿ ಒತ್ತಡ, ಅಸಮಾಧಾನ, ಬಂಡಾಯ, ಪಕ್ಷಾಂತರ... ಎಲ್ಲರೂ ಶಾಸಕರಾಗಿ ‘ಸೇವೆ’ ಮಾಡಲು ಉತ್ಸುಕರು.

ಅಧಿವೇಶನಕ್ಕೆ ಹೋಗದೇ ಸಂಬಳ ಪಡೆಯಬಹುದು. ಪ್ರವಾಸ ಮಾಡದೇ ಭತ್ಯೆ ಹೊಡೆಯಬಹುದು. ಬಂಗಲೆ ಕೆಡವಿ ಕಟ್ಟಬಹುದು. ಬರಗಾಲದಲ್ಲಿ ವಿದೇಶ ಪ್ರವಾಸ ಮಾಡಬಹುದು. ಜನರ ಮಕ್ಕಳಿಗೆ ನಾಡಪ್ರೇಮ ಬೋಧಿಸಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಬಹುದು. ನಾಲ್ಕುಪಟ್ಟು ಆಸ್ತಿ ಗಳಿಸಬಹುದು...

ಚುನಾವಣಾ ಕಣದಲ್ಲಿರುವವರು ಯಾರೂ ಬಡವರಲ್ಲ, ನಿರ್ಗತಿಕರಲ್ಲ. ಹಣ ಹಾಕಿ ಹಣ ಮಾಡಲು ಹಂಬಲಿಸುವವರು. ಒಟ್ಟಾರೆ ಇಂದು ಲಾಭದಾಯಕ ದಂಧೆ ಎಂದರೆ ರಾಜಕೀಯ ಮಾತ್ರ! ಕುಟುಂಬ ಉದ್ಧಾರಕ್ಕೆ ತಾರಕಮಂತ್ರ. ಒಂದು ದಿನ ಮತ ಹಾಕಿ ಐದು ವರ್ಷ ಮಾಲೆ ಹಾಕುತ್ತ ಮರ್ಜಿ ಹಿಡಿದು ಸಾಯುವುದು ಪ್ರಜೆಯ ಹಣೆಬರಹ. ಪ್ರಜೆ 50 ಸಾವಿರ ಸಾಲಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರೆ, ತಿಂಗಳಿಗೆ 5 ಲಕ್ಷ ಪಡೆಯುವ ‘ಸೇವಕರು’ ನಮ್ಮಲ್ಲಿದ್ದಾರೆ. ಇದು ಸಂಬಳದ ನೌಕರರ ಸಂಭ್ರಮ ಹಾಗೂ ಸರ್ವಾಧಿಕಾರ. ಸೇವಕರಿಗೆ ಇರುವ ಅನುಕೂಲತೆ, ಆರ್ಥಿಕ ಭದ್ರತೆ ಮಾಲೀಕನಿಗಿಲ್ಲ. ಅದಕ್ಕಾಗಿಯೇ ಟಿಕೆಟ್‌ಗಾಗಿ ಹೊಡೆದಾಡಿ ಸಾಯುತ್ತಿದ್ದಾರೆ.

– ಅಶೋಕಕುಮಾರ ಅರ್ಕಸಾಲಿ, ಕಲಘಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT