ಶನಿವಾರ, ಡಿಸೆಂಬರ್ 14, 2019
20 °C
ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ಬಗ್ಗೆ ಟೀಕೆ

ನೀರಸ ಕಾರ್ಯಕ್ರಮ: ಬೇಸರ

ಎಪಿ Updated:

ಅಕ್ಷರ ಗಾತ್ರ : | |

ನೀರಸ ಕಾರ್ಯಕ್ರಮ: ಬೇಸರ

ಗೋಲ್ಡ್ ಕೋಸ್ಟ್‌: ಭಾನುವಾರ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭ ನೀರಸವಾಗಿತ್ತು ಎಂಬ ಟೀಕೆಗಳು ಕೇಳಿಬಂದಿವೆ. ಸುದೀರ್ಘ ಭಾಷಣಗಳು ಪ್ರೇಕ್ಷಕರಿಗೆ ಬೇಸರ ತರಿಸಿದ್ದವು ಎಂದು ಅನೇಕರು ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕ್ರೀಡಾಕೂಟ ಆಯೋಜನಾ ಸಮಿತಿಯ ಮುಖ್ಯಸ್ಥ ಪೀಟರ್ ಬೀಟೀ ಸಾರ್ವಜನಿಕರ ಕ್ಷಮೆ ಕೋರಿದ್ದಾರೆ.

ಕಾಮನ್‌ವೆಲ್ತ್ ಕೂಟದ ಸಮಾರೋಪ ಸಮಾರಂಭವು ಉದ್ಘಾಟನಾ ಸಮಾರಂಭಕ್ಕಿಂತ ಭಿನ್ನವಾಗಿರುತ್ತದೆ. ಕ್ರೀಡಾಪಟುಗಳಿಗೇ ಅಲ್ಲಿ ಆದ್ಯತೆ ಇರುತ್ತದೆ. ಅವರ ಸಾಧನೆಗಳನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಈ ಬಾರಿಯ ಕೂಟದ ಮುಕ್ತಾಯ ಸಮಾರಂಭ ವ್ಯತಿರಿಕ್ತವಾಗಿತ್ತು. ಈ ಬಗ್ಗೆ ಟ್ವಿಟರ್‌ನಲ್ಲಿ ಟೀಕೆಗಳು ಕೇಳಿಬಂದಿದ್ದವು.

ಆಸ್ಪತ್ರೆಯಿಂದ ಹಾಕಿನ್ಸ್ ಬಿಡುಗಡೆ

ಕೊನೆಯ ದಿನ ನಡೆದಿದ್ದ ಮ್ಯಾರಥಾನ್ ಸಂದರ್ಭದಲ್ಲಿ ಕುಸಿದು ಬಿದ್ದಿದ್ದ ಸ್ಕಾಟ್ಲೆಂಡ್‌ನ ಕಲುಮ್‌ ಹಾಕಿನ್ಸ್‌ ಅವರು ಕೆಲವೇ ತಾಸುಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರು ಕ್ರೀಡಾಪಟುಗಳ ತಂಡದ ಜೊತೆ ಸ್ವದೇಶಕ್ಕೆ ವಾಪಸಾಗಿದ್ದಾರೆ.

28 ಡಿಗ್ರಿ ಸೆಲ್ಶಿಯಸ್‌ ತಾಪಮಾನದ ಸಂದರ್ಭದಲ್ಲಿ ನಡೆದಿದ್ದ ಓಟದ ಅಂತಿಮ ಗೆರೆಯತ್ತ ಸಾಗಿದ್ದ ಹಾಕಿನ್ಸ್ ಪ್ರತಿಸ್ಪರ್ಧಿಗಿಂತ ಎರಡು ನಿಮಿಷಗಳ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಹಾಕಿನ್ಸ್ ಕುಸಿದು ಬಿದ್ದಿದ್ದರು. ಅವರಿಗೆ ವೈದ್ಯಕೀಯ ನೆರವು ನೀಡಲು ತಡಮಾಡಿದ್ದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು.

ಪ್ರತಿಕ್ರಿಯಿಸಿ (+)