ಮಂದನೆರವಂಡ, ಮೇರಿಯಂಡ, ಚೆರಿಯಪಂಡಕ್ಕೆ ಗೆಲುವು

7

ಮಂದನೆರವಂಡ, ಮೇರಿಯಂಡ, ಚೆರಿಯಪಂಡಕ್ಕೆ ಗೆಲುವು

Published:
Updated:

ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಚೆರಿಯಪರಂಬು ಜನರಲ್‌ ಕೆ.ಎಸ್‌.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ 22ನೇ ವರ್ಷದ ಕುಲ್ಲೇಟಿರ ಹಾಕಿ ಉತ್ಸವದಲ್ಲಿ ಸೋಮವಾರ 11 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು.

ಕಾಂಗೀರ ತಂಡದ ವಿರುದ್ಧ ಮಂದನೆರವಂಡ ತಂಡವು 6–5ರಿಂದ ಗೆದ್ದರೆ, ಪಂದ್ಯಂಡದ ವಿರುದ್ಧ ಮೇರಿಯಂಡ 2–1ರಿಂದ ಜಯ ಗಳಿಸಿತು. ಮೇರಿಯಂಡ ಪರ ರಾಯ್ ಅಯ್ಯಣ್ಣ ಹಾಗೂ ರೋಷನ್ ಮಾದಪ್ಪ ತಲಾ ಒಂದು ಗೋಲು ದಾಖಲಿಸಿದರೆ, ಪಂದ್ಯಂಡ ಪರ ಮಿಲನ್

ಬೋಪಣ್ಣ ಒಂದು ಗೋಲು ದಾಖಲಿಸಿದರು.

ಚೆರಿಯಪಂಡ ತಂಡವು ಮುಲ್ಲೇಂಗಡ ತಂಡವನ್ನು 5–4 ಗೋಲುಗಳ ಅಂತರದಿಂದ ಮಣಿಸಿತು. ಬೊಪ್ಪಂಡ, ಕಂಗಾಂಡ, ಬಲ್ಲಾಡಿಚಂಡ, ಮೂಕಳೆರ, ಮಾಚಿಮಂಡ, ಮಲ್ಚಿರ, ಮಾದಂಡ, ಪೆಮ್ಮುಡಿಯಂಡ ತಂಡಗಳು ಕೂಡ ಗೆಲುವು ಸಾಧಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry