ಅಫ್ಗನ್‌ ಆಟಗಾರ ಮಹಮ್ಮದ್‌ ಶಹಜಾದ್‌ಗೆ ದಂಡ

7

ಅಫ್ಗನ್‌ ಆಟಗಾರ ಮಹಮ್ಮದ್‌ ಶಹಜಾದ್‌ಗೆ ದಂಡ

Published:
Updated:
ಅಫ್ಗನ್‌ ಆಟಗಾರ ಮಹಮ್ಮದ್‌ ಶಹಜಾದ್‌ಗೆ ದಂಡ

ಕಾಬೂಲ್‌, ಅಫ್ಗಾನಿಸ್ಥಾನ: ಅನುಮತಿ ಪಡೆಯದೇ ಪಾಕಿಸ್ತಾನದ ಕ್ಲಬ್‌ ಒಂದರಲ್ಲಿ ಆಡಿದ ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್‌ ಮಹಮ್ಮದ್ ಶಹಜಾದ್‌ ಅವರಿಗೆ ದಂಡ ವಿಧಿಸಲಾಗಿದೆ. ಅವರನ್ನು ತಕ್ಷಣ ತಾಯ್ನಾಡಿಗೆ ಬರುವಂತೆ ಆದೇಶಿಸಲಾಗಿದ್ದು ₹2,87,000 ಮೊತ್ತವನ್ನು ದಂಡದ ರೂಪದಲ್ಲಿ ಭರಿಸುವಂತೆ ತಿಳಿಸಲಾಗಿದೆ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿ ಲುತ್ಫುಲ್ಲಾ ಸ್ಟಾನಿಕ್‌ಜೈ ತಿಳಿಸಿದ್ದಾರೆ.

ಜಿಂಬಾಬ್ವೆಯಲ್ಲಿ, 2019ರ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡಿ ತಂಡ ಮರಳುವಾಗ ಶಹಜಾದ್‌ ನೇರವಾಗಿ ಪಾಕಿಸ್ತಾನಕ್ಕೆ ತೆರಳಿದ್ದರು. ಅಲ್ಲಿ ಪಂದ್ಯಗಳನ್ನು ಆಡಲು ನಿರಾಕ್ಷೇಪಣಾ ಪತ್ರವನ್ನು ಅವರು ಪಡೆದುಕೊಂಡಿರಲಿಲ್ಲ ಎಂದು ಲುಫ್ತುಲ್ಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry