ಐಪಿಎಲ್‌ ಬೆಟ್ಟಿಂಗ್‌: ಆರು ಜನರ ಬಂಧನ

7

ಐಪಿಎಲ್‌ ಬೆಟ್ಟಿಂಗ್‌: ಆರು ಜನರ ಬಂಧನ

Published:
Updated:

ವಿಜಯಪುರ: ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತಲ್ಲೀನರಾಗಿದ್ದ ಆರು ಮಂದಿಯನ್ನು ನಗರದ ಗೋಳಗುಮ್ಮಟ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಶಾಂತವೀರ ನಗರದ ಮಲ್ಲಿಕಾರ್ಜುನ ಸಿದ್ದಪ್ಪ ಬೀರಲದಿನ್ನಿ, ದರಬಾರ ಹೈಸ್ಕೂಲ್ ಬಳಿಯ ರಫೀಕ್‌ ಮಸ್ತಾನಸಾಬ್ ಮಕಾನದಾರ, ಜಾಡರಗಲ್ಲಿಯ ಬಂದೇನವಾಜ ಪೀರ್‌ಪಾಷಾ ಮಕಾನದಾರ, ರಾಜಾಜಿನಗರದ ವಿನಯ ವಸಂತರಾವ್‌ ಜೋಶಿ, ವಿಕ್ರಮ ವಸಂತರಾವ್‌ ಜೋಶಿ, ಸುಭಾಸ ಕಾಲೊನಿಯ ಸುರೇಶ ಶರಣಪ್ಪ ದಿಂಡವಾರ ಬಂಧಿತ ಆರೋಪಿಗಳು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್‌ ತಂಡಗಳ ನಡುವಿನ ಆಟಕ್ಕೆ ಇವರು ಬೆಟ್ಟಿಂಗ್‌ ಕಟ್ಟುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry