ಶುಕ್ರವಾರ, ಡಿಸೆಂಬರ್ 6, 2019
17 °C

ವಿದೇಶಿ ಗೂಢಚಾರರ ಪತ್ತೆಗೆ ವೆಬ್‌ಸೈಟ್‌ ಆರಂಭಿಸಿದ ಚೀನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಿದೇಶಿ ಗೂಢಚಾರರ ಪತ್ತೆಗೆ ವೆಬ್‌ಸೈಟ್‌ ಆರಂಭಿಸಿದ ಚೀನಾ

ಬೀಜಿಂಗ್‌: ವಿದೇಶಿ ಗೂಢಚಾರರನ್ನು ಪತ್ತೆಹಚ್ಚಿ ಸರ್ಕಾರಕ್ಕೆ ಮಾಹಿತಿ ತಿಳಿಸಲು ಚೀನಾ ಸರ್ಕಾರವು ಮ್ಯಾಂಡ್ರಿನ್‌ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ವೆಬ್‌ಸೈಟ್‌ ಆರಂಭಿಸಿದೆ. ದೇಶದ ಭದ್ರತೆಗೆ ಮಾರಕವಾಗುವ ವ್ಯಕ್ತಿಗಳ ಬಗ್ಗೆ ನಾಗರಿಕರು ಈ ಜಾಲತಾಣದಲ್ಲಿ ದೂರು ದಾಖಲಿಸಬಹುದಾಗಿದೆ.

ರಾಷ್ಟ್ರೀಯ ಭದ್ರತಾ ವಿಭಾಗವು www.12339.gov.in ಹೆಸರಿನಲ್ಲಿ ವೆಬ್‌ಸೈಟ್‌ಗೆ ಚಾಲನೆ ನೀಡಿದೆ. ದೊಂಬಿಗೆ ಪ್ರಚೋದನೆ, ಜನಾಂಗೀಯ ಪ್ರತ್ಯೇಕತಾವಾದ, ಸೇನಾ ಮಾಹಿತಿಗಳ ಬೇಹುಗಾರಿಕೆ ನಡೆಸುವವರ ವಿರುದ್ಧ ದೂರು ದಾಖಲಿಸಲು ಅವಕಾಶವಿದೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಇಂತಹ ಮಾಹಿತಿ ನೀಡುವ ವ್ಯಕ್ತಿಗಳಿಗೆ ಬಹುಮಾನ ನೀಡುವ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿಲ್ಲ. ಆದರೆ ‘ಬೀಜಿಂಗ್‌ ಸಿಟಿ ನ್ಯಾಷನಲ್‌ ಸೆಕ್ಯೂರಿಟಿ ಬ್ಯುರೋ, ಕನಿಷ್ಠ 10 ಸಾವಿರ ಯುವಾನ್‌ನಿಂದ (₹1.4ಲಕ್ಷ ) ಗರಿಷ್ಠ 50 ಸಾವಿರ ಯುವಾನ್‌ (₹52 ಲಕ್ಷ) ನೀಡುವುದಾಗಿ ಘೋಷಿಸಿದೆ’ ಎಂದು ಬೀಜಿಂಗ್‌ ಡೈಲಿ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)