ಭಾನುವಾರ, ಡಿಸೆಂಬರ್ 15, 2019
23 °C

ಬಾರ್ಬರಾ ಬುಷ್‌ ಅನಾರೋಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಬಾರ್ಬರಾ ಬುಷ್‌ ಅನಾರೋಗ್ಯ

ಹ್ಯೂಸ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್‌.ಡಬ್ಲ್ಯೂ ಬುಷ್‌ ಅವರ ಪತ್ನಿ ಬಾರ್ಬರಾ ಬುಷ್‌ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ

ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ ಎಂದು ಅವರ ಕುಟುಂಬದ ವಕ್ತಾರ ಜಿಮ್‌ ಮೆಕ್‌ಗ್ರಾತ್‌ ತಿಳಿಸಿದ್ದಾರೆ.

92 ವರ್ಷದ ಬಾರ್ಬರಾ ಬುಷ್‌ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ.

ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್‌ ಎಚ್‌.ಡಬ್ಲ್ಯೂ ಬುಷ್‌ ಪತ್ನಿಯ ಜೊತೆಗೆ ಇದ್ದಾರೆ. ಇವರಿಗೀಗ 93 ವರ್ಷ. ಇವರಿಗೂ ಆರೋಗ್ಯದ ಸಮಸ್ಯೆಯಿದ್ದು, ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಾಲಿಕುರ್ಚಿಯನ್ನು ಬಳಸುತ್ತಾರೆ. ಇವರ ಮದುವೆಯಾಗಿ 73 ವರ್ಷ ಸಂದಿದೆ.

ಪುತ್ರಿ ಡೊರೊ, ಪುತ್ರರಾದ ಮಾರ್ವಿನ್‌ ಮತ್ತು ನೀಲ್‌, ಜಾರ್ಜ್‌ ಡಬ್ಲ್ಯೂ ಬುಷ್‌ ಮತ್ತು ಜೆಬ್‌ ಬುಷ್‌ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)