ನಾಪತ್ತೆಯಾಗಿದ್ದ ಸೈನಿಕ ಉಗ್ರ ಸಂಘಟನೆಗೆ?

7

ನಾಪತ್ತೆಯಾಗಿದ್ದ ಸೈನಿಕ ಉಗ್ರ ಸಂಘಟನೆಗೆ?

Published:
Updated:

ಶ್ರೀನಗರ: ಇದೇ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಸೇನೆಯ ಜಮ್ಮು ಮತ್ತು ಕಾಶ್ಮೀರ ಲೈಟ್‌ ಇನ್‌ಫ್ಯಾಂಟ್ರಿ ತುಕಡಿಯ (ಜೆಎಕೆಎಲ್‌ಐ) ಸೈನಿಕ ಇದ್ರೀಸ್‌ ಮಿರ್‌, ಭಾನುವಾರ ಹಿಜ್ಬುಲ್ ಮುಜಾಹಿದೀನ್‌ ಉಗ್ರ ಸಂಘಟನೆ ಸೇರಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಿಂದ ಮಿರ್‌ ನಾಪತ್ತೆಯಾಗಿದ್ದರು. ಇನ್ನೂ ಇಬ್ಬರೊಂದಿಗೆ ಇವರು ಉಗ್ರ ಸಂಘಟನೆ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಿರ್‌ ಅವರನ್ನು ಈಚೆಗೆ ಜಾರ್ಖಂಡ್‌ಗೆ ವರ್ಗಾಯಿಸಲಾಗಿತ್ತು. ಇದರಿಂದ ಅವರು ಬೇಸರಗೊಂಡಿದ್ದರು ಎಂದು ಅವರು ವಿವರಿಸಿದ್ದಾರೆ. ಆದರೆ, ಸೇನೆಯು ಮಿರ್‌ ಕಾಣೆಯಾಗಿದ್ದಾರೆ ಎಂದಷ್ಟೇ ತಿಳಿಸಿದ್ದು, ಉಗ್ರ ಸಂಘಟನೆ ಸೇರಿರುವುದನ್ನು ಖಚಿತಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry