7

ಕಾರ್ತಿ ಚಿದಂಬರಂ ಬಂಧನ ತಡೆ ಅವಧಿ ವಿಸ್ತರಣೆ

Published:
Updated:
ಕಾರ್ತಿ ಚಿದಂಬರಂ ಬಂಧನ ತಡೆ ಅವಧಿ ವಿಸ್ತರಣೆ

ನವದೆಹಲಿ: ಏರ್‌ಸೆಲ್‌–ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರನ್ನು ಮೇ 2ರವರೆಗೂ ಬಂಧಿಸದಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು (ಇ.ಡಿ) ದಾಖಲಿಸಿಕೊಂಡಿರುವ ಒಟ್ಟು ಎರಡು ಪ್ರಕರಣಗಳಿಗೆ ಸಂಬಂಧಿಸಿ ಸೋಮವಾರ ವಿಚಾರಣೆ ನಡೆಯಿತು.

ನಿರೀಕ್ಷಣಾ ಜಾಮೀನು ಕೋರಿ ಕಾರ್ತಿ ಸಲ್ಲಿಸಿರುವ ಅರ್ಜಿ ಕುರಿತು ಪ್ರತಿಕ್ರಿಯಿಸಲು ಇ.ಡಿ. ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರು ಈ ಆದೇಶ ಹೊರಡಿಸಿದರು.

ಮಾರ್ಚ್‌ 24ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಏಪ್ರಿಲ್‌ 16ರವರೆಗೆ ಕಾರ್ತಿ ಅವರನ್ನು ಬಂಧಿಸದಂತೆ ಆದೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry