ಮಹಿಳಾ ಟೆಕಿ ಮೇಲೆ ಲೈಂಗಿಕ ದೌರ್ಜನ್ಯ; ಪೋಸ್ಟ್‌ ವೈರಲ್‌

7
‘ಶೇಮ್‌ಲೇಸ್‌ ಬೆಂಗಳೂರು ಸಿಟಿ ಪೊಲೀಸ್‌’ ಅಭಿಯಾನ

ಮಹಿಳಾ ಟೆಕಿ ಮೇಲೆ ಲೈಂಗಿಕ ದೌರ್ಜನ್ಯ; ಪೋಸ್ಟ್‌ ವೈರಲ್‌

Published:
Updated:

ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಾಲ್ವರು ಅಪರಿಚಿತರು, ಮಹಿಳಾ ಟೆಕಿಯೊಬ್ಬರ ಜತೆ ಜಗಳ ತೆಗೆದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಈ ಬಗ್ಗೆ ಸಂತ್ರಸ್ತೆಯ ಸಹೋದ್ಯೋಗಿ ಅರ್ಜುನ್, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ವೈರಲ್‌ ಆಗಿದ್ದು, ಘಟನೆಯನ್ನು ಹಲವರು ಖಂಡಿಸಿದ್ದಾರೆ.

‘ಶನಿವಾರ (ಏ. 14) ಮಧ್ಯಾಹ್ನ ಊಟ ಮುಗಿಸಿಕೊಂಡು ನಾವಿಬ್ಬರು, ಕಚೇರಿಗೆ ವಾಪಸ್‌ ಹೋಗುತ್ತಿದ್ದೆವು. ಪಾನಮತ್ತರಾಗಿ ರಸ್ತೆಯಲ್ಲಿ ನಿಂತುಕೊಂಡಿದ್ದ ಅಪರಿಚಿತರು, ಸಹೋದ್ಯೋಗಿಯ ಕೈ ಹಿಡಿದು ಎಳೆದಿದ್ದರು. ಆಗ  ಒಬ್ಬನ ಕಪಾಳಕ್ಕೆ ಹೊಡೆದಿದ್ದರು’ ಎಂದು ಅರ್ಜುನ್ ಹೇಳಿಕೊಂಡಿದ್ದಾರೆ.

‘ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದ ಅಪರಿಚಿತರು, ಜಗಳ ತೆಗೆದರು. ಸಹೋದ್ಯೋಗಿಯ ಟೀ–ಶರ್ಟ್‌ ಹಿಡಿದು ಎಳೆದಾಡಿದರು. ಸ್ಥಳದಲ್ಲಿ ಜನರಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ’ ಎಂದು ಬೇಸರ

ವ್ಯಕ್ತಪಡಿಸಿದ್ದಾರೆ.

‘ನಾನು ಭಾರತೀಯ ಎಂದು ಹೇಳಿಕೊಳ್ಳಲು ಅಸಹ್ಯವಾಗುತ್ತಿದೆ. ಕಾಶ್ಮೀರದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಉಳಿದ ರಾಜ್ಯಗಳಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅಂಥ ಘಟನೆಯನ್ನು ನಾನು ಕಣ್ಣಾರೆ ಕಂಡೆ’ ಎಂದು ಬರೆದುಕೊಂಡಿದ್ದಾರೆ.

ಶೇಮ್‌ಲೇಸ್ ಪೊಲೀಸ್‌: ಅರ್ಜುನ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ‘ಶೇಮ್‌ಲೇಸ್‌ ಬೆಂಗಳೂರು ಸಿಟಿ ಪೊಲೀಸ್‌’ ಎಂಬ ಟ್ಯಾಗ್‌ಲೈನ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ‘ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.

**

ಲೈಂಗಿಕ ದೌರ್ಜನ್ಯದ ಬಗ್ಗೆ ಯಾರೊಬ್ಬರೂ ದೂರು ನೀಡಿಲ್ಲ. ಪೋಸ್ಟ್‌ ಮಾಡಿರುವ ವ್ಯಕ್ತಿಯೇ ದೂರು ಕೊಟ್ಟರೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆ

– ಅಜಯ್ ಹಿಲೋರಿ, ಪೂರ್ವ ವಿಭಾಗದ ಡಿಸಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry