ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮವಾಸ್ಯೆ ದಿನದಿಂದಲೇ ಶುಭಾರಂಭ: ಮಹಿಮ ಪಟೇಲ್‌

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇವತ್ತು ಅಮವಾಸ್ಯೆ. ಈ ದಿನವೇ ಪಕ್ಷದ ಮೊದಲ ಪಟ್ಟಿಯ ಬಿಡುಗಡೆ ಮಾಡುತ್ತಿದ್ದೇನೆ. ಶೂನ್ಯದಿಂದಲೇ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇವೆ. ನಮಗೆ ಶುಭವಾಗಲಿದೆ’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ.ಪಟೇಲ್‌ ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಅವರು, ‘ನಾವು ಸೊನ್ನೆಯಿಂದ ಆರಂಭಿಸಿದರೂ ಪಕ್ಷ ಸದೃಢವಾಗಿ ಬೆಳೆಯುತ್ತದೆ ಮತ್ತು 150 ವರ್ಷಗಳ ಕಾಲ ಉಳಿಯುತ್ತದೆ’ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

‘ಒಂದು ಕಾಲದಲ್ಲಿ 2 ಸ್ಥಾನ ಹೊಂದಿದ್ದ ಬಿಜೆಪಿ ಈಗ ದೇಶವನ್ನು ಆಳುತ್ತಿದೆ. ನಮ್ಮ ಪಕ್ಷದಲ್ಲಿ ಈಗ ಶಕ್ತಿ ಇಲ್ಲದಿರಬಹುದು. ಆದರೆ, ಮುಂದೊಂದು ದಿನ ಜೆಡಿಯು ಪ್ರಬಲ ಶಕ್ತಿಯಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ಜೆಡಿಯುವನ್ನು ಅಧಿಕಾರಕ್ಕೆ ತರುವ ದಿಸೆಯಲ್ಲಿ ಎಲ್ಲರೂ ಶ್ರಮವಹಿಸಬೇಕು’ ಎಂದು ಪಕ್ಷದ ನಾಯಕರಿಗೆ ತಿಳಿಸಿದರು.

‘ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕಳಂಕರಹಿತ ಆಡಳಿತ ದೇಶಕ್ಕೇ ಮಾದರಿ. ರಾಜ್ಯದಲ್ಲೂ ಜೆಡಿಯು ಅಂತಹುದೇ ಆಡಳಿತ ನೀಡಲು ಬಯಸಿದೆ. ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಇದು ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಮತ್ತು ಜೆ.ಎಸ್‌.ಪಟೇಲ್‌ ಕಟ್ಟಿ ಬೆಳಿಸಿದ ಪಕ್ಷ. ಜನರಿಗೆ ನಮ್ಮ ಪಕ್ಷದ ಬಗ್ಗೆ ವಿಶ್ವಾಸವಿದೆ’ ಎಂದೂ ಮಹಿಮ ಹೇಳಿದರು.

‘ಮೊದಲ ಪಟ್ಟಿಯಲ್ಲಿ 15 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ಇದೇ 22 ರಂದು ಎರಡನೇ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಸುಮಾರು 20 ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು’ ಎಂದರು.

ಅಭ್ಯರ್ಥಿಗಳ ಪಟ್ಟಿ :

ಮಹಿಮ ಜೆ.ಪಟೇಲ್‌– ಚನ್ನಗಿರಿ

ಅರುಣಕುಮಾರ ಸಿ.ಪಾಟೀಲ– ಆಳಂದ

ಹಜರತ ಅಲಿ ಶೇಖ್‌– ಕುಂದಗೋಳ

ಟಪಾಲ್ ಗಣೇಶ್– ಬಳ್ಳಾರಿ ನಗರ

ಜಿ.ಎನ್‌.ತೋಟದ– ನವಲಗುಂದ

ಡಿ.ಕೆ.ಹಿತ್ತಲಮನಿ– ರಾಣೆಬೆನ್ನೂರು

ವಿಜಯೇಂದ್ರ ರೆಡ್ಡಿ– ಚಿಕ್ಕನಾಯಕನಹಳ್ಳಿ

ಬಿ.ರಾಮಯ್ಯ– ನೆಲಮಂಗಲ

ರಾಜು ನಾಯಕವಾಡಿ– ಹುಬ್ಬಳ್ಳಿ ಸೆಂಟ್ರಲ್‌

ರಾಜೀವ್‌ ಕೋಟ್ಯಾನ್‌– ಕುಂದಾಪುರ

ಎಸ್‌. ಪುರುಷೋತ್ತಮ – ದೊಡ್ಡಬಳ್ಳಾಪುರ

ದೊಡ್ಡಪ್ಪ ಮಾಲಿ ಪಾಟೀಲ– ಗುರುಮಿಠ್ಕಲ್

ಎಸ್‌.ಎಸ್‌.ರಡ್ಡೇರ–ಗದಗ

ಎಚ್‌.ರಾಮಚಂದ್ರಪ್ಪ– ಹೊಳಲ್ಕೆರೆ

ಜಿ.ಈಶಪ್ಪ–ಕೂಡ್ಲಿಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT