ಶನಿವಾರ, ಡಿಸೆಂಬರ್ 14, 2019
25 °C
ಮಿಂಚಿದ ನಿತೀಶ್‌ ರಾಣ, ರಾಬಿನ್‌ ಉತ್ತಪ್ಪ

ಕೆಕೆಆರ್‌ಗೆ ಮಣಿದ ಡೆಲ್ಲಿ ಡೇರ್‌ ಡೆವಿಲ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕೆಕೆಆರ್‌ಗೆ ಮಣಿದ ಡೆಲ್ಲಿ ಡೇರ್‌ ಡೆವಿಲ್ಸ್‌

ಕೋಲ್ಕತ್ತ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಅಮೋಘ ಸಾಮರ್ಥ್ಯ ತೋರಿದ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ಐಪಿಎಲ್‌ನಲ್ಲಿ ಸೋಮವಾರ ರಾತ್ರಿ ಭರ್ಜರಿ ಜಯ ಸಾಧಿಸಿತು.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 71 ರನ್‌ಗಳಿಂದ ಮಣಿಸಿತು.

201 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ತಂಡದ ರಿಷಭ್ ಪಂತ್‌ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರ ಎರಡಂಕಿ ಮೊತ್ತ ದಾಟಿದರು. ನಾಯಕ ಗೌತಮ್ ಗಂಭೀರ್‌ ಕೇವಲ ಎಂಟು ರನ್‌ ಗಳಿಸಿ ಮರಳಿದರು. ಮೂರು ವಿಕೆಟ್ ಕಬಳಿಸಿದ ಸುನಿಲ್ ನಾರಾಯಣ್‌ ಐಪಿಎಲ್‌ನಲ್ಲಿ 100

ವಿಕೆಟ್‌ ಪಡೆದುಕೊಂಡ ಸಾಧನೆ ಮಾಡಿದರು.

ಉತ್ತಪ್ಪ, ರಾಣಾ ಮಿಂಚು: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್ ಲಿನ್‌, ಅಗ್ರ ಕ್ರಮಾಂಕದ ರಾಬಿನ್ ಉತ್ತಪ್ಪ ಮತ್ತು ನಿತೀಶ್ ರಾಣಾ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಉತ್ತಮ ಮೊತ್ತ ಪೇರಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ ಸುನಿಲ್ ನಾರಾಯಣ್‌ ಒಂದು ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಆದರೆ ಅವರ ಜೋಡಿ ಕ್ರಿಸ್‌ ಲಿನ್‌ ಮೂರನೇ ಕ್ರಮಾಂಕದ ಉತ್ತಪ್ಪ ಅವರ ಜೊತೆಗೂಡಿ 61 ರನ್‌ ಸೇರಿಸಿದರು.

19 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಎರಡು ಬೌಂಡರಿ ಗಳಿಸಿದ ಉತ್ತಪ್ಪ 35 ರನ್‌ಗಳೊಂದಿಗೆ ಮಿಂಚಿದರು. ಅವರು ಔಟಾದ ನಂತರ ಕ್ರೀಸ್‌ಗೆ ಬಂದ ಎಡಗೈ ಬ್ಯಾಟ್ಸ್‌ಮನ್‌ ನಿತೀಶ್ ರಾಣಾ ಬೌಲರ್‌ಗಳ ಬೆವರಿಳಿಸಿದರು. ಲಿನ್‌ ಮತ್ತು ನಾಯಕ ದಿನೇಶ್ ಕಾರ್ತಿಕ್ ಔಟಾದ

ನಂತರ ಆ್ಯಂಡ್ರೆ ರಸೆಲ್‌ ಜೊತೆ ಐದನೇ ವಿಕೆಟ್‌ಗೆ 61 ರನ್ ಸೇರಿಸಿದರು.

ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿ ಸಿಡಿಸಿದ ರಾಣಾ 35 ಎಸೆತಗಳಲ್ಲಿ 59 ರನ್‌ ಗಳಿಸಿ 19ನೇ ಓವರ್‌ನಲ್ಲಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಸೆಲ್‌ 12 ಎಸೆತಗಳಲ್ಲಿ ಆರು ಸಿಕ್ಸರ್‌ಗಳೊಂದಿಗೆ 41 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಕೋಲ್ಕತ್ತ ನೈಟ್ ರೈಡರ್ಸ್‌: 20 ಓವರ್‌ಗಳಲ್ಲಿ 9ಕ್ಕೆ 200 (ಕ್ರಿಸ್‌ ಲಿನ್‌ 31, ರಾಬಿನ್‌ ಉತ್ತಪ್ಪ 35, ನಿತೀಶ್ ರಾಣಾ 59, ದಿನೇಶ್‌ ಕಾರ್ತಿಕ್‌ 19, ಆ್ಯಂಡ್ರೆ ರಸೆಲ್‌ 41; ಟ್ರೆಂಟ್ ಬೌಲ್ಟ್‌ 29ಕ್ಕೆ2, ಕ್ರಿಸ್ ಮಾರಿಸ್‌ 41ಕ್ಕೆ2, ರಾಹುಲ್ ತೇವಥಿಯಾ 18ಕ್ಕೆ3). ಡೆಲ್ಲಿ ಡೇರ್‌ ಡೆವಿಲ್ಸ್‌: 14.2 ಓವರ್‌ಗಳಲ್ಲಿ 129ಕ್ಕೆ ಆಲೌಟ್‌ (ರಿಷಭ್ ಪಂತ್ 43, ಗ್ಲೆನ್ ಮ್ಯಾಕ್ಸ್‌ವೆಲ್‌ 47; ಸುನಿಲ್ ನಾರಾಯಣ್‌ 18ಕ್ಕೆ3, ಕುಲದೀಪ್ ಯಾದವ್‌ 32ಕ್ಕೆ3). ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 71 ರನ್‌ಗಳ ಜಯ.

ಪ್ರತಿಕ್ರಿಯಿಸಿ (+)