ಭಾನುವಾರ, ಡಿಸೆಂಬರ್ 15, 2019
25 °C

‘ರೊನಾಲ್ಡೊ ಜೊತೆ ಹೋಲಿಕೆಗೆ ಅರ್ಹ ಕೊಹ್ಲಿ’

ಪಿಟಿಐ Updated:

ಅಕ್ಷರ ಗಾತ್ರ : | |

‘ರೊನಾಲ್ಡೊ ಜೊತೆ ಹೋಲಿಕೆಗೆ ಅರ್ಹ ಕೊಹ್ಲಿ’

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಶ್ರೇಷ್ಠ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಹೋಲಿಕೆಗೆ ಅರ್ಹ ಎಂದು ವೆಸ್ಟ್ ಇಂಡೀಸ್‌ ಕ್ರಿಕೆಟಿಗ ಡ್ವೇನ್ ಬ್ರಾವೊ ಹೇಳಿದರು.

‘ಕೊಹ್ಲಿ ನನ್ನ ಕಿರಿಯ ಸಹೋದರ ಡ್ಯಾರೆನ್ ಬ್ರಾವೊ ಜೊತೆ 19 ವರ್ಷದೊಳಗಿನವರ ಕ್ರಿಕೆಟ್ ಆಡಿದ್ದಾರೆ. ಆ ಸಂದರ್ಭದಲ್ಲಿ ನಾನು ವಿರಾಟ್ ಕೊಹ್ಲಿಯನ್ನು ನೋಡಿ ಕಲಿ ಎಂದು ಆತನಿಗೆ ಹೇಳುತ್ತಿದ್ದೆ. ಅಂಥ ಆಟಗಾರರನ್ನು ಹತ್ತಿರದಿಂದ ನೋಡಿದಾಗ ರೊನಾಲ್ಡೊ ಅವರನ್ನೇ ನೋಡಿದಂತಾಗುತ್ತದೆ’ ಎಂದು ಡ್ವೇನ್ ಹೇಳಿದರು.

ಪ್ರತಿಕ್ರಿಯಿಸಿ (+)