ಕೈ ತಪ್ಪಿದ ಬಿಜೆಪಿ ಟಿಕೆಟ್‌: ಅನಂತಕುಮಾರ ಹೆಗಡೆ ಮನೆ ಎದುರು ಎಲ್‌.ಟಿ.ಪಾಟೀಲ ಬೆಂಬಲಿಗರ ಪ್ರತಿಭಟನೆ

7

ಕೈ ತಪ್ಪಿದ ಬಿಜೆಪಿ ಟಿಕೆಟ್‌: ಅನಂತಕುಮಾರ ಹೆಗಡೆ ಮನೆ ಎದುರು ಎಲ್‌.ಟಿ.ಪಾಟೀಲ ಬೆಂಬಲಿಗರ ಪ್ರತಿಭಟನೆ

Published:
Updated:
ಕೈ ತಪ್ಪಿದ ಬಿಜೆಪಿ ಟಿಕೆಟ್‌: ಅನಂತಕುಮಾರ ಹೆಗಡೆ ಮನೆ ಎದುರು ಎಲ್‌.ಟಿ.ಪಾಟೀಲ ಬೆಂಬಲಿಗರ ಪ್ರತಿಭಟನೆ

ಶಿರಸಿ: ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಎಲ್.ಟಿ.ಪಾಟೀಲ ಬೆಂಬಲಿಗರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮನೆ ಎದುರು ಪ್ರತಿಭಟನೆ ನಡೆಸಿದರು.

ಸೋಮವಾರ ಬಿಡಗಡೆಯಾಗಿರುವ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಶಾಸಕ ವಿ.ಎಸ್. ಪಾಟೀಲ ಅವರ ಹೆಸರು ಪ್ರಕಟವಾಗಿದೆ.

ಈ ಬಗ್ಗೆ ಎಲ್.ಟಿ.ಪಾಟೀಲ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು.

ಅನಂತಕುಮಾರ ಹೆಗಡೆ ಸಲಹೆಯ ಮೇರೆಗೆ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು.

ಕೂಡಲೇ ಅಭ್ಯರ್ಥಿಯ ಬದಲಾವಣೆಯಾಗಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು.

ವಿ.ಎಸ್.ಪಾಟೀಲ ಹಣ ಕೊಟ್ಟು ಟಿಕೆಟ್ ಪಡೆದಿದ್ದಾರೆ ಎಂದು ಎಲ್.ಟಿ.ಪಾಟೀಲ‌ ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಎಲ್.ಟಿ.ಪಾಟೀಲ, ಒಂದು ವರ್ಷದ‌ ಹಿಂದೆ ಬಿಜೆಪಿ ಸೇರ್ಪಡೆಗೊಂಡಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry