ಶುಕ್ರವಾರ, ಡಿಸೆಂಬರ್ 6, 2019
25 °C

ಮರಾಠ ಸಮುದಾಯದ ಕಾರ್ಯಕರ್ತರ ಆಕ್ರೋಶ; ಕಾಂಗ್ರೆಸ್‌ ಬಾವುಟಕ್ಕೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಾಠ ಸಮುದಾಯದ ಕಾರ್ಯಕರ್ತರ ಆಕ್ರೋಶ; ಕಾಂಗ್ರೆಸ್‌ ಬಾವುಟಕ್ಕೆ ಬೆಂಕಿ

ಧಾರವಾಡ: ಮರಾಠ ಸಮುದಾಯದ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ–ಧಾರವಾಡ ಪಶ್ಚಿಮ ಮತಕ್ಷೇತ್ರಕ್ಕೆ  ಸಮಾಜದ ಮುಖಂಡ ಎಸ್.ಆರ್.ಮೊರೆ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಆಕ್ರೋಶಗೊಂಡ ಮರಾಠ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಾಯಕರ ಇಚ್ಛೆಯಂತೆ ಸ್ಪರ್ಧೆ: ಸಿದ್ದಯ್ಯ

ಹಾಸನ:  ಪಕ್ಷದ ವರಿಷ್ಟರ ಇಚ್ಚೆಯಂತೆ ಸಕಲೇಶಪುರದಿಂದ‌ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ‌ಸಿದ್ದಯ್ಯ ಹೇಳಿದರು.

‘ಸರ್ಕಾರಿ‌ ನೌಕರಿಯಿಂದ ನಿವೃತ್ತಿಯಾಗಿದ್ದೇನೆ ಸೇವೆಯಿಂದ ಅಲ್ಲಾ. ನನಗೇನು ರಾಜಕೀಯಕ್ಕೆ ಬರಬೇಕೆಂದು ಇಚ್ಚೆ ಇರಲಿಲ್ಲ. ನಿವೃತ್ತಿ ಬಳಿಕವೂ ಸರ್ಕಾರ ವಿವಿಧ ಹುದ್ದೆ ನೀಡಿತ್ತು. ಇದೀಗ ಸಕಲೇಶಪುರದಿಂದ ಸ್ಪರ್ಧೆ ಮಾಡಿ ಎಂದು ನಾಯಕರು‌ ಹೇಳಿದ್ದಾರೆ. ನಾಯಕರ ಇಚ್ಛೆಯಂತೆ ಸ್ಪರ್ಧಿಸುತ್ತಿದ್ದೇನೆ’ ಎಂದರು.

ರಾಜಕೀಯಕ್ಕೆ ಬರುತ್ತಿರುವ ನಿವೃತ್ತರಲ್ಲಿ ನಾನೇನು ಮೊದಲಿಗನಲ್ಲ. ಎಲ್ಲಾ ಅಸಮಾಧಾನ ಶಮನ ಮಾಡಿ‌ ಗೆದ್ದು ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)