ಸೋಮವಾರ, ಆಗಸ್ಟ್ 10, 2020
26 °C

ಲವ್ಲಿ ಸ್ಟಾರ್‌ಗೆ 42

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲವ್ಲಿ ಸ್ಟಾರ್‌ಗೆ 42

ಚಂದನವನದ ಪ್ರತಿಭಾನ್ವಿತ ನಟ ‘ನೆನಪಿರಲಿ’ ಪ್ರೇಮ್‌ 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

2004ರಲ್ಲಿ ಪ್ರಾಣ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರಿಗೆ ಹೆಸರು ತಂದು ಕೊಟ್ಟಿದ್ದು ‘ನೆನಪಿರಲಿ’ ಚಿತ್ರ. 2005ರಲ್ಲಿ ಈ ಸಿನಿಮಾ ಬಿಡುಗಡೆಯಾದರೂ ಪ್ರೇಮ್‌ ಹೆಸರು ಹೇಳಿದ ತಕ್ಷಣ ಹೊಳೆಯುವುದು ಆ ಸಿನಿಮಾವೇ. ನೆನಪಿರಲಿ ಚಿತ್ರದಲ್ಲಿ ಪ್ರೇಮ್‌ ಅವರದು ಪ್ರಬುದ್ಧ ಅಭಿನಯ. ಪ್ರೇಮ ಹಾಗೂ ಸ್ನೇಹದ ಮಹತ್ವ ಸಾರುವ ಆ ಚಿತ್ರದಲ್ಲಿ ವರ್ಷಾ ಹಾಗೂ ಪ್ರೇಮ್‌ ಜೋಡಿ ಪ್ರೇಕ್ಷಕರ ಮನ ಗೆದ್ದಿತ್ತು.

ನಟಿ ರಮ್ಯಾ ಅವರ ಜೊತೆ ನಟಿಸಿದ ‘ಜೊತೆ ಜೊತೆಯಲಿ’ ಬಾಕ್ಸಾಫೀಸಿನಲ್ಲಿ ಗೆದ್ದಿತ್ತು. ಈ ಚಿತ್ರವೇ ಪ್ರೇಮ್‌ಗೆ ‘ಲವ್ಲಿ ಸ್ಟಾರ್‌’ ಬಿರುದು ತಂದುಕೊಟ್ಟಿತ್ತು. ಪಲ್ಲಕ್ಕಿ, ಜೊತೆಗಾರ, ಚಂದ್ರ, ಗೌತಮ್‌, ಗುಣವಂತ, ಮತ್ತೆ ಬನ್ನಿ ಪ್ರೀತ್ಸೋಣ, ಚಾರ್‌ ಮಿನಾರ್‌, ಫೇರ್‌ ಆ್ಯಂಡ್‌ ಲವ್ಲಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಚೆಗೆ ಬಿಡುಗಡೆಯಾದ ‘ಚೌಕ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲೇ ಪ್ರೇಮ್‌ ಅಭಿನಯಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.