ಸಮಾನ ಗಳಿಕೆ ದಂಪತಿ ಹೆಚ್ಚು ಸುಖಿ

ಮಂಗಳವಾರ, ಮಾರ್ಚ್ 19, 2019
28 °C

ಸಮಾನ ಗಳಿಕೆ ದಂಪತಿ ಹೆಚ್ಚು ಸುಖಿ

Published:
Updated:
ಸಮಾನ ಗಳಿಕೆ ದಂಪತಿ ಹೆಚ್ಚು ಸುಖಿ

ಹಣ ಎಂದಿಗೂ ಸಂತೋಷಕ್ಕೆ ಸರಿಸಮಾನವಲ್ಲ ಎಂಬುದು ಜನಜನಿತ ಮಾತು. ಆದರೆ ಹೊಸ ಅಧ್ಯಯನವೊಂದರ ಪ್ರಕಾರ, ಸಂಬಳವೂ ಸೌಹಾರ್ದಯುತ ಸಂಬಂಧದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಮಾನ ಗಳಿಕೆಯ ದಂಪತಿ ಹೆಚ್ಚು ಕಾಲ ಖುಷಿಯಿಂದಿರುತ್ತಾರಂತೆ. ನ್ಯೂಯಾರ್ಕಿನ ಕಾರ್ನೆಲ್‌ ವಿಶ್ವವಿದ್ಯಾಲಯದ ಮಾನವ– ಪರಿಸರ ವಿಜ್ಞಾನದಲ್ಲಿ ಸಂಶೋಧನೆ ಮಾಡುತ್ತಿರುವ ಪ್ಯಾಟ್ರಿಕ್‌ ಇಶಿಝುಕ ಅವರು ಈ ಅಧ್ಯಯನವನ್ನು ನಡೆಸಿದ್ದು, ಸಮಾನ ಸಂಬಳ ಪಡೆಯುತ್ತಿರುವ ದಂಪತಿಗಳಲ್ಲಿ ವಿರಸ, ಕಲಹ ಕಡಿಮೆ ಎಂದು ಹೇಳಿದ್ದಾರೆ.

ಸಮಾನತೆಯು ಸುಭದ್ರತೆಯನ್ನು ಉತ್ತೇಜಿಸುತ್ತದೆ. ಹೆಚ್ಚು ಕಾಲ ಒಟ್ಟಿಗೇ ಇರುವಂತೆ ಮಾಡುತ್ತದೆ. ಮನೆಗೆಲಸಗಳನ್ನು ಹಂಚಿಕೊಂಡು ಮಾಡುವ ದಂಪತಿಗಳಲ್ಲಿ ಸಂತೋಷವೂ ಹೆಚ್ಚು. ಇಬ್ಬರಲ್ಲಿ ಒಬ್ಬರ ಆದಾಯ ಹೆಚ್ಚಾಗಿದ್ದಾರೆ ಅದೇ ವಿಚಾರಕ್ಕೆ ಅಸಮಾಧಾನ ಕಂಡುಬರಬಹುದು. ಹೆಚ್ಚು ಸಂಬಳ ಗಳಿಸುವ ವ್ಯಕ್ತಿ ದಾಂಪತ್ಯಲ್ಲಿ ಮೇಲುಗೈ ಸಾಧಿಸಲು ಯತ್ನಿಸಿದಾಗ ವಿರಸ ಉಂಟಾಗಬಹುದು ಎಂಬುದು ಸಂಶೋಧನೆಯ ವಿಶ್ಲೇಷಣೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry