ಅತ್ಯಾಚಾರ ಖಂಡಿಸಿ ಪ್ರತಿಭಟನೆ

7

ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published:
Updated:

ಕವಿತಾಳ: ಕಾಶ್ಮೀರದಲ್ಲಿ ಬಾಲಕಿ ಮೇಲೆ ಮತ್ತು ಉತ್ತರಪ್ರದೇಶ ಉನ್ನಾವದಲ್ಲಿ ನಡೆದ ಅತ್ಯಾಚಾರ ಖಂಡಿಸಿ ಎಸ್ಎಫ್ಐ ಮತ್ತು ಡಿವೈಎಫ್ಐ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.

ಆನ್ವರಿ ಕ್ರಾಸ್‌ನಲ್ಲಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್ಎಫ್ಐ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವುಕುಮಾರ ಮ್ಯಾಗಳಮನಿ ಮಾತನಾಡಿ, ‘ದಲಿತ ಹಾಗೂ ಅಲ್ಪಸಂಖ್ಯಾತ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದರು.

ಎಂ.ಡಿ.ಮೆಹಬೂಬ್, ಎಂ.ಡಿ.ಅಲೀಮ್, ಖಾಸಿಂ ಮುಲ್ಲಾ, ಡಿವೈಎಫ್ಐ ಸಂಘಟನೆಯ ರಾಜ್ಯ ಘಟಕದ ಸದಸ್ಯ ಶಿವರಾಜ ಮ್ಯಾಗಳಮನಿ, ಮಕ್ತುಮ್ಸಾಬ್ ಅಲ್ತಾಫ್, ಖಾಜಾಪಾಷಾ, ಶರಣಬಸವ ಬುಳ್ಳಾಪುರ, ಶಿವನಪ್ಪ ದಿನ್ನಿ, ಅನ್ಸಾರಿ, , ಅಸ್ಲಾಂಪಾಷ, ಸಲೀಂ, ಗೋಕುಲ್ ಸಾಬ್, ಮುಸ್ತಫಾ, ಆಜಂಪಾಶಾ, ರಸೂಲ್ಸಾಬ್, ರೆಹಮಾನ್, ಉಸ್ಮಾನ್, ಮೆಹಬೂಬ್ ಅರಕೇರಿ, ರಮೇಶ, ಬಸವರಾಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry