ಭಾನುವಾರ, ಡಿಸೆಂಬರ್ 15, 2019
25 °C

‘ಟಗರು– 2’ ಪ್ರಚಾರಕ್ಕೆ ಹಾಡು ರೆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಟಗರು– 2’ ಪ್ರಚಾರಕ್ಕೆ ಹಾಡು ರೆಡಿ

ಈಚೆಗೆ ಬಿಡುಗಡೆಯಾದ 'ಟಗರು’ ಸಿನಿಮಾದಲ್ಲಿ ಶಿವಣ್ಣನ ಖದರಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಈ ಚಿತ್ರ ಹಾಗೂ ಚಿತ್ರದ ಹಾಡುಗಳು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿವೆ. ಈಗ ಟಗರು– 2 ಚಿತ್ರದ ಪ್ರಮೋಶನಲ್‌ ಹಾಡು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದೇನಪ್ಪಾ ಟಗರು– 1 ಚಿತ್ರವೇ ಈಗಷ್ಟೇ ಬಿಡುಗಡೆಯಾಗಿದೆ. ಅಷ್ಟರಲ್ಲೇ ಟಗರು– 2 ಚಿತ್ರ ಸೆಟ್ಟೇರುತ್ತಿದೆಯಾ ಎಂದು ಯೋಚಿಸುತ್ತಿದ್ದೀರಾ? ಶಿವರಾಜ್‌ ಕುಮಾರ್‌ ಅವರ ಅಭಿಮಾನಿಯಾದ ಗದಗ ಜಿಲ್ಲೆಯ ಶಿರಹಟ್ಟಿಯ ಮಾಚೇನಹಳ್ಳಿ ಗ್ರಾಮದ ಸತೀಶ ಕಮ್ಮಾರ ಅವರು ‘ಟಗರು–2’ ಚಿತ್ರಕ್ಕೆ ಪ್ರಮೋಶನಲ್‌ ಹಾಡು ಎಂಬ ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ‘ಬಂತು ಬಂತು ಬಂತೂ...ಮದವೇರಿದ ಟಗರು’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದವರು ಸತೀಶ್‌ ಅವರಾದರೆ, ಮಂಗಳೂರಿನ ಲಾಯ್ ವ್ಯಾಲೈಟೈನ್ ಸಲ್ಧಾನಾ ಸಂಗೀತ ಸಂಯೋಜನೆ ಮಾಡಿ ಸ್ವತಃ ಅವರೇ ಹಾಡಿದ್ದಾರೆ.

ನಾಲ್ಕು ನಿಮಿಷದ ಈ ಹಾಡಿನಲ್ಲಿ  ಲಾಯ್ ವ್ಯಾಲೈಟೈನ್ ಅವರು ಜೋಷ್‌ನಲ್ಲಿ ಹಾಡುತ್ತಿರುವ ದೃಶ್ಯಗಳು ಹಾಗೂ ಟಗರು ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರ ಹೊಡೆದಾಟ, ಆ್ಯಕ್ಷನ್‌ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ವಿಶೇಷ ಅಂದರೆ ಈ ಹಾಡನ್ನು ಟಗರು ಸಿನಿಮಾ ಬಿಡುಗಡೆಯಾದ ಮರುದಿನವೇ ಸತೀಶ್‌ ಹಾಗೂ ಲಾಯ್‌ ಅವರು ರಚನೆ ಮಾಡಿ ಯುಟ್ಯೂಬ್‌ಬಲ್ಲಿ ಹರಿಬಿಟ್ಟಿದ್ದಾರೆ. ಈ ಹಾಡನ್ನು ಶಿವರಾಜ್‌ಕುಮಾರ್‌, ದಿನಕರ್‌ ತೂಗುದೀಪ ಅವರು ಕೇಳಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸತೀಶ್‌ ಖುಷಿ ವ್ಯಕ್ತಪಡಿಸುತ್ತಾರೆ.

ಈ ಹಾಡನ್ನು ಇಲ್ಲಿಯವರೆಗೂ 1.5 ಲಕ್ಷ ಜನ ನೋಡಿದ್ದಾರೆ. ಹಾಡು ಕೇಳಲು–  https://bit.ly/2H15lFQ 

ಪ್ರತಿಕ್ರಿಯಿಸಿ (+)