ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ ಇಂದಿನಿಂದ

ವಿಜಯಪುರ ಜಿಲ್ಲೆಯಲ್ಲಿ ಪ್ರಚಾರ ಕಾರ್ಯ, ಮತದಾರರ ಓಲೈಕೆ ಆರಂಭ
Last Updated 17 ಏಪ್ರಿಲ್ 2018, 11:18 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಏಪ್ರಿಲ್ 17ರ ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇದೇ 24 ಕೊನೆ ದಿನ.

ಸರ್ಕಾರಿ ರಜೆ ದಿನ ಹೊರತುಪಡಿಸಿ, ಉಳಿದ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ತಿಳಿಸಿದರು.

ನಾಮಪತ್ರ ಸ್ವೀಕರಿಸುವ ಸ್ಥಳ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಮುದ್ದೇಬಿಹಾಳದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಎನ್‌.ರಾಘವೇಂದ್ರ ಸ್ವೀಕರಿಸಲಿದ್ದಾರೆ. ತಹಶೀಲ್ದಾರ್‌ ಮಂಜುಳಾ ನಾಯ್ಕ್‌ ಸಹಾಯಕ ಚುನಾವಣಾಧಿಕಾರಿಯಾಗಿ ಸಹಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–8277930603, 9448644944).

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಸಿಂದಗಿ ಮಿನಿ ವಿಧಾನಸೌಧದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಬಸವರಾಜ ಆರ್‌.ಸೋಮಣ್ಣವರ, ಸಹಾಯಕ ಚುನಾವಣಾಧಿಕಾರಿಗಳಾದ, ತಹಶೀಲ್ದಾರ್‌ ಡಿ.ಎಸ್‌.ಜಮಾದಾರ್‌, ಮಂಜುಳಾನಾಯ್ಕ್‌ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9449613984, 9448995345, 9448644944).

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಬಸವನಬಾಗೇವಾಡಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ದುರ್ಗೇಶ ರುದ್ರಾಕ್ಷಿ, ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್‌ ಎಸ್‌.ಎಸ್‌.ಸಂಪಗಾವಿ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9480857001, 8553260792).

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಾರ್ಯಾಲಯ (ಜಲ ನಗರ)ದಲ್ಲಿ ಚುನಾವಣಾಧಿಕಾರಿ ವಿಜಯಕುಮಾರ ಹೊನಕೇರಿ, ಸಹಾಯಕ ಚುನಾವಣಾಧಿಕಾರಿ, ವಿಜಯಪುರ ತಹಶೀಲ್ದಾರ್ ರವಿಚಂದ್ರ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9483285072, 9900558621).

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ವಿಜಯಪುರ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ವರಪ್ರಸಾದ್‌ ರೆಡ್ಡಿ, ಸಹಾಯಕ ಚುನಾವಣಾಧಿಕಾರಿ, ವಿಜಯಪುರ ತಹಶೀಲ್ದಾರ್ ರವಿಚಂದ್ರ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9980096652, 9900558621).

ನಾಗಠಾಣ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ವಿಜಯಪುರ ಜಿಲ್ಲಾ ಪಂಚಾಯ್ತಿ ಆವರಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಟಿ.ಸಿದ್ದಣ್ಣ, ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್‌ ರವಿಚಂದ್ರ, ತಹಶೀಲ್ದಾರ್‌ ಗ್ರೇಡ್‌–2 ಕೆ.ವೈ.ಬಿದರಿ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9448301645, 9900558621, 9448995345).

ಇಂಡಿ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಇಂಡಿ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿ ಡಾ.ಪಿ.ರಾಜಾ, ಸಹಾಯಕ ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಡಿ.ಎಂ.ಪಾಣಿ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9008181222, 94499855855).

ಸಿಂದಗಿ ವಿಧಾನಸಭಾ ಕ್ಷೇತ್ರದ ನಾಮಪತ್ರಗಳನ್ನು ಸಿಂದಗಿ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಸಿ.ವಿ.ಕೊಡ್ಲಿ, ಸಹಾಯಕ ಚುನಾವಣಾಧಿಕಾರಿಗಳಾದ ತಹಶೀಲ್ದಾರ್‌ ಡಿ.ಎಸ್.ಜಮಾದಾರ, ಡಿ.ಎಂ.ಪಾಣಿ ಸ್ವೀಕರಿಸಲಿದ್ದಾರೆ. (ಸಂಪರ್ಕ ಸಂಖ್ಯೆ–9632706680, 9448995345, 9449985855).

ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳು: ಅಭ್ಯರ್ಥಿಯೂ ಒಳಗೊಂಡಂತೆ ಐವರು ಮಾತ್ರ ಚುನಾವಣಾಧಿಕಾರಿ ಕೊಠಡಿಯೊಳಗೆ ತೆರಳಿ ನಾಮಪತ್ರ ಸಲ್ಲಿಸಬಹುದು.

ರಾಜಕೀಯ ಪಕ್ಷಗಳ ಅಭ್ಯರ್ಥಿಯಾದರೆ ಒಬ್ಬರು ಸೂಚಕರ ಸಹಿ ಹೊಂದಿರಬೇಕು. ಪಕ್ಷೇತರ ಅಭ್ಯರ್ಥಿಯಾದರೆ ನಾಮಪತ್ರಕ್ಕೆ 10 ಮಂದಿ ಸೂಚಕರ ಸಹಿ ಹೊಂದಿರಬೇಕು. ಅಗತ್ಯ ದಾಖಲೆಗಳೊಂದಿಗೆ ನಾಲ್ಕು ಸೆಟ್‌ ನಾಮಪತ್ರ ಸಲ್ಲಿಸಬೇಕಿದೆ. ಅದರಲ್ಲಿ ಮೂಲ ಪ್ರತಿ ಹಾಗೂ ಮೂರು ಜೆರಾಕ್ಸ್ ಪ್ರತಿ ದೃಢೀಕರಣಗೊಂಡಿರಬೇಕು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ನಾಮಪತ್ರ ಸಲ್ಲಿಸಲು ಅಭ್ಯರ್ಥಿಗೆ 25 ವರ್ಷ ತುಂಬಿರಬೇಕು. ನೋಟರಿ ಸಮಕ್ಷಮದಲ್ಲಿ ನಮೂನೆ ಸಂಖ್ಯೆ 26ರಲ್ಲಿ ಘೋಷಣೆ ಹೊಂದಿರಬೇಕು. ಅದರಲ್ಲಿ ಯಾವುದೇ ಕಾಲಂ ಖಾಲಿ ಬಿಟ್ಟಿರಬಾರದು. ಅಭ್ಯರ್ಥಿಯು ಅಫಿಡವಿಟ್‌ನಲ್ಲಿ ಎಲ್ಲಾ ಪುಟಗಳಿಗೂ ಸಹಿ ಮಾಡಿರಬೇಕು. ಅನ್ವಯವಾಗದ ಕಾಲಂಗಳಲ್ಲಿ NIL ಎಂದು ಬರೆದಿರಬೇಕು. ನೋಟರಿಯಿಂದ ದೃಢೀಕರಿಸಿರಬೇಕು.

ನಾಮಪತ್ರ ಸಲ್ಲಿಸುವ ಹಿಂದಿನ ದಿನ ಇಲ್ಲವೇ, ಅದೇ ದಿನ ಅಭ್ಯರ್ಥಿಯು ತನ್ನ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಇಲ್ಲವೇ ಅಂಚೆ ಕಚೇರಿಯಲ್ಲಿ ಚುನಾವಣೆಗಾಗಿಯೇ ತೆಗೆದಿರುವ ಖಾತೆಯ ದೃಢೀಕೃತ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಸರ್ಕಾರಿ ಸಂಸ್ಥೆಗಳಿಗೆ ಯಾವುದೇ ಬಾಕಿ ಉಳಿಸಿಕೊಂಡಿರದ ಬಗ್ಗೆ ಹೆಚ್ಚುವರಿ ಅಫಿಡವಿಟ್ ಲಗತ್ತಿಸಬೇಕಿದ್ದು, ಅದನ್ನು ನೋಟರಿಯಿಂದ ದೃಢೀಕರಿಸಿರಬೇಕು. ಸ್ಟ್ಯಾಂಪ್‌ ಸೈಜಿನ ಈಚಿನ ನಾಲ್ಕು ಫೋಟೊ, ಮತಪತ್ರದಲ್ಲಿ ಹೆಸರು ಯಾವ ರೀತಿ ಮುದ್ರಿತವಾಗಬೇಕು ಎಂಬುದರ ಬಗ್ಗೆ ಪ್ರಮಾಣಪತ್ರ ಲಗತ್ತಿಸಬೇಕು. ಚುನಾವಣೆ ಆಯೋಗ ನೀಡಿದ ಇತರೆ ದಾಖಲೆಗಳನ್ನು ಒದಗಿಸಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳಾಗಿ ದ್ದಲ್ಲಿ ‘ಎ’ ಫಾರಂ ಹಾಗೂ ‘ಬಿ’ ಫಾರಂನ ಮೂಲ ಪ್ರತಿಯನ್ನು ಸಹಿಯೊಂದಿಗೆ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT