ಎಟಿಎಂಗಳಲ್ಲಿ ದುಡ್ಡಿಲ್ಲ; ಈ ಸಮಸ್ಯೆ ತಾತ್ಕಾಲಿಕ ಎಂದ ಅರುಣ್ ಜೇಟ್ಲಿ

7

ಎಟಿಎಂಗಳಲ್ಲಿ ದುಡ್ಡಿಲ್ಲ; ಈ ಸಮಸ್ಯೆ ತಾತ್ಕಾಲಿಕ ಎಂದ ಅರುಣ್ ಜೇಟ್ಲಿ

Published:
Updated:
ಎಟಿಎಂಗಳಲ್ಲಿ ದುಡ್ಡಿಲ್ಲ; ಈ ಸಮಸ್ಯೆ ತಾತ್ಕಾಲಿಕ ಎಂದ ಅರುಣ್ ಜೇಟ್ಲಿ

ನವದೆಹಲಿ: ದೇಶದ ವಿವಿಧ ನಗರಗಳಲ್ಲಿ ಎಟಿಎಂನಲ್ಲಿ ನಗದು ಕೊರತೆ ಕಂಡುಬಂದಿದ್ದು, ಜನರು ದುಡ್ಡಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಎಟಿಎಂಗಳಲ್ಲಿ ದುಡ್ಡಿಲ್ಲ ಎಂದು ಜನರು ಗೋಳಿಡುತ್ತಿದ್ದು, ಈ ಸಮಸ್ಯೆ ತಾತ್ಕಾಲಿಕ ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನಾವು ಈಗಾಗಲೇ ದೇಶದಲ್ಲಿರುವ ನಗದು ಕೊರತೆಯ ಅವಲೋಕನ ನಡೆಸಿದ್ದೇವೆ. ದೇಶದಲ್ಲಿ ಸಾಕಷ್ಟು ನಗದು ಚಲಾವಣೆಯಲ್ಲಿದೆ ಮತ್ತು ಬ್ಯಾಂಕ್‍ಗಳಲ್ಲಿ ದುಡ್ಡಿದೆ. ಕೆಲವೊಂದು ಕಡೆ ದಿಢೀರ್ ಮತ್ತು ಅನಿರೀಕ್ಷಿತವಾಗಿ ನಗದು ಬೇಡಿಕೆ ಬಂದಿರುವುದರಿಂದ ಕೆಲವು ಕಡೆ ತಾತ್ಕಾಲಿಕವಾಗಿ ನಗದು ಕೊರತೆ ಎದುರಾಗಿದೆ.  ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಕೆಲವೊಂದು ರಾಜ್ಯಗಳಲ್ಲಿ ನಗದು ಕೊರತೆ ಇದ್ದರೆ ಕೆಲವೆಡೆ ಲಭ್ಯತೆ ಜಾಸ್ತಿ ಇದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮತ್ತು  ಭಾರತೀಯ ರಿಸರ್ವ್ ಬ್ಯಾಂಕ್ ಯತ್ನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಹಾಯಕ ಸಚಿವ ಎಸ್‌ ಪಿ ಶುಕ್ಲಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry