ಭಾನುವಾರ, ಡಿಸೆಂಬರ್ 15, 2019
25 °C

ಚಿತ್ರದುರ್ಗದಲ್ಲಿ 'ಕೈ’ ಟಿಕೆಟ್‌ ತಪ್ಪಿರುವ, ಬಂಟ್ವಾಳದಿಂದ ಜೆಡಿಯು, ಬ್ಯಾಡಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗದಲ್ಲಿ 'ಕೈ’ ಟಿಕೆಟ್‌ ತಪ್ಪಿರುವ, ಬಂಟ್ವಾಳದಿಂದ ಜೆಡಿಯು, ಬ್ಯಾಡಗಿಯಲ್ಲಿ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಮಂಗಳೂರು/ಹಾವೇರಿ/ಚಿತ್ರದುರ್ಗ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನ ಮಂಗಳವಾರ ಚಿತ್ರದುರ್ಗ, ಮಂಗಳೂರು, ಹಾವೇರಿಯಲ್ಲಿ ತಲಾ ಒಂದರಂತೆ ನಾಮಪತ್ರ ಸಲ್ಲಿಕೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಬಾಲಕೃಷ್ಣ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.

ಹಾವೇರಿ: ಬ್ಯಾಡಗಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಮೊದಲ ಹಾವೇರಿ ಜಿಲ್ಲೆಯಲ್ಲಿ ಒಂದು ನಾಮ ಪತ್ರ ಮಾತ್ರ ಸಲ್ಲಿಕೆಯಾಗಿದೆ.

ಬ್ಯಾಡಗಿ ಕ್ಷೇತ್ರದಿಂದ ಪಕ್ಷೇತರರಾಗಿ ಕೆರವಡಿ ಗ್ರಾಮದ ರುದ್ರಯ್ಯ ಸಾಲಿಮಠ ತಂದೆ ಅಂದಾನಯ್ಯ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಐದು ಕ್ಷೇತ್ರಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ.

ಚಿತ್ರದುರ್ಗ: ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿರುವ ಶಿವುಯಾದವ್‌ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈ ತಪ್ಪಿರುವ ವಕೀಲ ಶಿವು ಯಾದವ್ ಸೋಮವಾರ ತಮ್ಮ ಬಬಲಿಗರೊಂದಿಗೆ ಜಿಲ್ಲಾಧಿಕಚೇರಿಗೆ ಆಗಮಿಸಿ ನಾಮ ಪತ್ರ ಸಲ್ಲಿಸಿದರು.

'ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ನನಗೇ ‘ಬಿ’ ಫಾರಂ ಕೊಡಯವ ವಿಶ್ವಾಸವಿದೆ' ಎಂದು ಶಿವು ಯಾದವ್ ತಿಳಿಸಿದರು.

ಪ್ರತಿಕ್ರಿಯಿಸಿ (+)