ಶನಿವಾರ, ಡಿಸೆಂಬರ್ 14, 2019
20 °C

ಬೆಳಗಾವಿ: ಎಂಇಎಸ್‌ ಬೆಂಬಲ ಕೋರಿದ ಕಾಂಗ್ರೆಸ್‌ ಜಿ.ಪಂ. ಸದಸ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಎಂಇಎಸ್‌ ಬೆಂಬಲ ಕೋರಿದ ಕಾಂಗ್ರೆಸ್‌ ಜಿ.ಪಂ. ಸದಸ್ಯ!

ಬೆಳಗಾವಿ: ಜಿಲ್ಲಾ ಪಂಚಾಯ್ತಿ ಬೆಳಗುಂದಿ ಕ್ಷೇತ್ರದ ಸದಸ್ಯ, ಕಾಂಗ್ರೆಸ್‌ನ ಮೋಹನ ಮೋರೆ ಅವರು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲ ಕೋರಿದ್ದಾರೆ.

ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಂಇಎಸ್‌ ಪ್ರಭಾವ ಹೊಂದಿದೆ. ಮರಾಠಾ ಸಮುದಾಯಕ್ಕೆ ಸೇರಿರುವ ಮೋರೆ ಅವರು, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಟಿಕೆಟ್‌ ನೀಡಿರುವುದರಿಂದ ಮೋರೆ ಅವರು ಎಂಇಎಸ್‌ನತ್ತ ಮುಖ ಮಾಡಿದ್ದಾರೆ.

ಬೆಂಬಲ ಕೋರಿದ್ದ ನಿಜ

‘ಮೋಹನ ಮೋರೆ ಅವರು ನಮ್ಮ ಬೆಂಬಲ ಕೋರಿ ಅರ್ಜಿ ಸಲ್ಲಿಸಿದ್ದು ನಿಜ. ಆದರೆ, ಇವರು ನಮ್ಮ ಸಂಘಟನೆಯ ಸದಸ್ಯರಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ’ ಎಂದು ಎಂಇಎಸ್‌ ವಿಕಾಸ ಕಲಘಟಗಿ ಪ್ರತಿಕ್ರಿಯೆಸಿದರು.

ನೋಟಿಸ್‌ ನೀಡಲಾಗಿದೆ

‘ಮೋಹನ ಮೋರೆ ಅವರು ಎಂಇಎಸ್‌ ಬೆಂಬಲ ಕೇಳಿರುವುದು ಪಕ್ಷದ ಗಮನಕ್ಕೆ ಬಂದಿದೆ. ಎಂಟು ದಿನಗಳೊಳಗೆ ವಿವರಣೆ ನೀಡುವಂತೆ ಕೆಪಿಸಿಸಿ ನೋಟಿಸ್‌ ನೀಡಿದೆ’ ಎಂದು ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ಪ್ರತಿಕ್ರಿಯಿಸಿ (+)