ಯಾಕೆ ಈ ಹಿಂಸೆ?

7

ಯಾಕೆ ಈ ಹಿಂಸೆ?

Published:
Updated:

ನಮ್ಮ ಬ್ಯಾಂಕ್‌ಗಳು ದಿನಕ್ಕೊಂದು ನೀತಿ ರೂಪಿಸುವ ಮೂಲಕ ಗ್ರಾಹಕರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿವೆ. ಖಾತೆಯಿಂದ ಹಣ ತೆಗೆಯಲು ಹೋದಾಗ ಬ್ಯಾಂಕ್‌ ಸಿಬ್ಬಂದಿ ನಡೆದುಕೊಳ್ಳುವ ರೀತಿ ಬಲು ವಿಚಿತ್ರವೆನಿಸುತ್ತದೆ. ಹತ್ತು ಸಾವಿರ ರೂಪಾಯಿ ತೆಗೆಯಬೇಕಾದರೆ ಬ್ಯಾಂಕಿನ ಹೊರಗಡೆ ನಿಯೋಜಿಸಿದ ಒಬ್ಬ ವ್ಯಕ್ತಿಯ ಹತ್ತಿರ ಹೋಗಬೇಕು. ₹ 40 ಸಾವಿರಕ್ಕೂ ಹೆಚ್ಚು ಹಣ ಪಡೆಯಲು ಇನ್ನೊಂದು ಕಡೆ ಹೋಗಬೇಕು. ಆಧಾರ್‌, ಪ್ಯಾನ್ ಕಾರ್ಡ್, ಹೆಬ್ಬೆರಳ ಗುರುತು... ಯಾವುದಾದರೊಂದು ಕಡ್ಡಾಯ. ಹಣ ಪಡೆದ ಬಳಿಕ ಖಾತೆಯಲ್ಲಿ ಎಷ್ಟು ಮೊತ್ತ ಉಳಿದಿದೆ ಎಂದು ತಿಳಿಯಲು ಇನ್ನೊಂದು ಕಡೆ ಹೋಗಬೇಕು... ಇಂಥ ಸ್ಥಿತಿಯಲ್ಲಿ ಅನಕ್ಷರಸ್ಥರ ಪಾಡು ದೇವರೇ ಬಲ್ಲ.

ಜನರಿಗೆ ಈ ರೀತಿಯ ಯಾತನೆ ಯಾಕೆ? ಸಿಬ್ಬಂದಿ ಇರುವುದು ಜನರಿಗಾಗಿಯೇ ಅಲ್ಲವೇ? ಅದನ್ನು ನೆನಪಿನಲ್ಲಿಟ್ಟು ಕನಿಷ್ಠ ವಿನಯವನ್ನಾದರೂ ಪ್ರದರ್ಶಿಸಬಾರದೇ? ಕ್ಯಾಷ್ ಕೌಂಟರ್‌ಗಳನ್ನು ಹೆಚ್ಚಿಸಿ, ಗ್ರಾಹಕ ಎಷ್ಟೇ ಹಣ ಪಡೆಯಲಿ, ಒಂದೇ ಕಡೆ ಅದನ್ನು ನೀಡಿ, ಗೊಂದಲರಹಿತ ವ್ಯವಸ್ಥೆ ಮಾಡಬಾರದೇ? ತಾಂತ್ರಿಕ ಅಡಚಣೆಯ ನೆಪ ಹೇಳಿ ಗ್ರಾಹಕರಿಗೆ ಹಿಂಸೆ ನೀಡುವುದನ್ನು ಬ್ಯಾಂಕ್‌ಗಳು ಇನ್ನಾದರೂ ನಿಲ್ಲಿಸಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry