ಶುಕ್ರವಾರ, ಜೂನ್ 5, 2020
27 °C

ಎಎಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಎಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 10 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಆಮ್‌ ಆದ್ಮಿ ಪಕ್ಷ (ಎಎಪಿ) ಬಿಡುಗಡೆ ಮಾಡಿದೆ.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದ ಪಕ್ಷದ ಶಿವಕುಮಾರ್‌ ಚೆಂಗಲರಾಯ, ‘ರಾಜ್ಯ ರಾಜಕೀಯದಲ್ಲಿ ತಂತ್ರಗಾರಿಕೆಗಿಂತ ಕುತಂತ್ರಗಾರಿಕೆ ಹೆಚ್ಚಾಗಿದೆ. ರಾಜಕೀಯವನ್ನು ಜನಪರಗೊಳಿಸುವ ಉದ್ದೇಶದಿಂದ ನಮ್ಮ ಪಕ್ಷ ಜನಪರ ಚಿಂತನೆ ಇರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದೆ’ ಎಂದರು.

‘ಇನ್ನೂ 25 ಅಭ್ಯರ್ಥಿಗಳ ಪಟ್ಟಿ ನಮ್ಮ ಬಳಿ ಇದ್ದು ಸದ್ಯದಲ್ಲಿಯೇ ಇನ್ನೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ನಮ್ಮ ಅಭ್ಯರ್ಥಿಗಳ ಸಂಖ್ಯೆ 40 ಮೀರುವುದಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವವರನ್ನು ಮೊದಲು ಮನೆಗೆ ಕಳುಹಿಸುತ್ತೇವೆ. ಹೀಗಾಗಿ ಪ್ರಮುಖ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ಈಗ ಬಿಡುಗಡೆ ಮಾಡಿರುವ ಒಟ್ಟು 28 ಅಭ್ಯರ್ಥಿಗಳ ಪಟ್ಟಿಯಲ್ಲಿ 25 ಜನ ಖಂಡಿತ ಗೆಲ್ಲುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿಗಳ ಪಟ್ಟಿ: ಆಸಿಫ್‌ ಹೆರಕಲ್‌ (ದೇವರಹಿಪ್ಪರಗಿ), ಅಜಿತ್‌ ಬಾಬು (ರಾಮನಗರ), ಬಿ.ಆರ್‌. ಭಾಸ್ಕರ್‌ ಪ್ರಸಾದ್‌ (ಮಹದೇವಪುರ), ಎ.ಇಳಂಗೋವನ್‌ (ಗಾಂಧಿನಗರ), ಫಾರೂಕ್‌ಸಾಬ್‌ ನದಾಫ (ಬೆಳಗಾವಿ ಉತ್ತರ), ಸದಾನಂದ ಮೇತ್ರಿ (ಬೆಳಗಾವಿ ದಕ್ಷಿಣ), ಸಂಜೀವ್‌ ಕುಮಾರ್‌ ಕಾರಿಕಲ್‌ (ಕಲಬುರ್ಗಿ ಉತ್ತರ), ಡಾ. ಸುಂದರ ಗೌಡ (ಚಿಕ್ಕಮಗಳೂರು), ಬಿ.ಪ್ರಭುಸ್ವಾಮಿ (ಗುಬ್ಬಿ), ಎಸ್‌.ಎಫ್‌.ಪಾಟೀಲ್‌ (ಧಾರವಾಡ ಗ್ರಾಮೀಣ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.