ಭಾನುವಾರ, ಡಿಸೆಂಬರ್ 15, 2019
25 °C

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಾಹನಕ್ಕೆ ಡಿಕ್ಕಿ ಹೊಡೆಯಲು ಬಂದ ಲಾರಿ; ಅದೃಷ್ಟವಶಾತ್ ಪಾರಾದ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಾಹನಕ್ಕೆ ಡಿಕ್ಕಿ ಹೊಡೆಯಲು ಬಂದ ಲಾರಿ; ಅದೃಷ್ಟವಶಾತ್ ಪಾರಾದ ಸಚಿವರು

ಶಿರಸಿ: ತಮ್ಮ‌ ವಾಹನದಲ್ಲಿ ಹೋಗುತ್ತಿರುವಾಗ ಲಾರಿಯೊಂದು ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಹಾನಿಯುಂಟು‌‌ ಮಾಡಲು ಯತ್ನಿಸಿತು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ರಾತ್ರಿ 11.30ಕ್ಕೆ  ಹಾವೇರಿ‌ ಜಿಲ್ಲೆ ರಾಣಿಬೆನ್ನೂರು ಹಲಗೇರಿ ಸಮೀಪ ಈ ಘಟನೆ ನಡೆದಿದೆ. ತಮ್ಮ ವಾಹನಕ್ಕೆ ಡಿಕ್ಕಿ  ಹೊಡೆಯಲು ಬಂದ ಲಾರಿ ಗುರಿ ತಪ್ಪಿ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ತಾನು ಪಾರಾಗಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ತಮ್ಮ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿ ಬಂಧಿತನಾದ ಲಾರಿ ಚಾಲಕನ ಫೋಟೊ ಮತ್ತು ಅಪಘಾತ ಸ್ಥಳದ ವಿಡಿಯೊವನ್ನು  ಸಚಿವರು ಟ್ವಿಟರ್‍‍ನಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆಯಲ್ಲಿ ಸಚಿವರ ಜತೆ ಇದ್ದ ನೌಕರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇದೊಂದು ಅಪಘಾತ ಎಂದು ಅನಿಸುತ್ತಿಲ್ಲ, ನನ್ನ ಪ್ರಾಣಕ್ಕೆ  ಅಪಾಯವನ್ನುಂಟು ಮಾಡಲು ಯತ್ನಿಸಲಾಗಿದೆ ಎಂಬ ಶಂಕೆ ಇದೆ. ಚಾಲಕ ನನ್ನ ವಾಹನಕ್ಕೆ ಡಿಕ್ಕಿ ಹೊಡೆಯಲು ಬಂದು ಆಮೇಲೆ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಮ್ಮ ಕಾರು ವೇಗವಾಗಿ ಚಲಿಸಿದ್ದರಿಂದ ಆತನ ವಾಹನ ಡಿಕ್ಕಿ ಹೊಡೆಯುವುದು ತಪ್ಪಿತು ಎಂದಿದ್ದಾರೆ ಸಚಿವರು.

ಪ್ರಸ್ತುತ ಘಟನೆ ಬಗ್ಗೆ ಸಚಿವರು ಮಾಡಿದ ಸರಣಿ ಟ್ವೀಟ್ ಹೀಗಿದೆ 

ನಾಸಿರ್ ಎಂಬ ಈತನಿಂದ ಸತ್ಯ ಹೊರಬರುವಂತೆ ಮಾಡಬೇಕು ಎಂದು ನಾನು ಪೊಲೀಸರಲ್ಲಿ ವಿನಂತಿಸುತ್ತೇನೆ. ಈ ಘಟನೆ ಹಿಂದೆ ಏನು ಉದ್ದೇಶವಿತ್ತು ಎಂಬುದನ್ನು ಅರಿಯಬೇಕು, ಆ ಕೆಲಸವನ್ನು ಪೊಲೀಸರು ಮಾಡುತ್ತಾರೆ ಎಂಬ ನಂಬಿಕೆ ನನಗಿದೆ.  

 

ಪ್ರತಿಕ್ರಿಯಿಸಿ (+)