ಪಾಟೀಲ ಪರ ಮಹಿಳೆಯರ ಪ್ರಚಾರ

7

ಪಾಟೀಲ ಪರ ಮಹಿಳೆಯರ ಪ್ರಚಾರ

Published:
Updated:

ಬೈಲಹೊಂಗಲ: ‘ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿರುವ ಡಾ.ವಿಶ್ವನಾಥ ಪಾಟೀಲ ಅವರನ್ನು ಎರಡನೇ ಬಾರಿ ಆಯ್ಕೆ ಮಾಡಿ ಬೈಲಹೊಂಗಲ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಸಹಕರಿಸಬೇಕು’ ಎಂದು ಬಿಜೆಪಿ ಮಹಿಳಾ ಮೊರ್ಚಾ ಸ್ಥಳೀಯ ಘಟಕದ ಅಧ್ಯಕ್ಷೆ ರತ್ನವ್ವಾ ಗೋಧಿ ಹೇಳಿದರು.

ಪಟ್ಟಣದ ಪುರಸಭೆ ವಾರ್ಡ್ ನಂ. 1 ಮತ್ತು 2ರಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರ ಜತೆಗೆ ಮತದಾರರ ಮನೆ, ಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.

ಪ್ರೀತಿ ಪಾಟೀಲ, ಅನಿತಾ ಹೋಟಿ, ದೀಪಾ ಜಕ್ಕಪ್ಪನವರ, ಶ್ರೀದೇವಿ ಹೋಟಿ, ಸುಜಾತಾ ಹರಕುಣಿ, ರಚನಾ ಪೂಜೇರಿ, ವಿದ್ಯಾ ಚಿಕ್ಕಮಠ, ರೂಪಾ ಯಡಳ್ಳಿ, ಗೌರವ್ವಾ ದೇಶನೂರ, ಮಂಜುಳಾ ಮಲ್ಲಾಪುರ, ರೂಪಾ ಕಡಕೋಳ, ಮಹಾದೇವಿ ಕಂಬಾರ, ಗೀತಾ ಹಲಕಿ, ಶ್ವೇತಾ ಬೋಳನ್ನವರ, ಸಾವಿತ್ರಿ ಬೋಳನ್ನವರ, ಶೈಲಾ ಬೋಳನ್ನವರ, ಜಯಶ್ರೀ ತೋಲಗಿ, ಗಿರಿಜಾ ಬೋಳನ್ನವರ, ಸುಲೋಚನಾ ಪತ್ತಾರ, ನಿರ್ಮಲಾ ಅಂದಾನಿ, ಪಾರ್ವತಿ ಬೋಳನ್ನವರ, ಸಾವಕ್ಕ ಕೋಟಗಿ, ಚನ್ನಮ್ಮ ಜವಳಿ, ತನುಜಾ ಪತ್ತಾರ, ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠಾ ಅಧ್ಯಕ್ಷ ಸಿ.ಕೆ.ಮೆಕ್ಕೇದ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಈಶ್ವರ ಬೋರಕನವರ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ವಾರ್ಡ್ ನಿವಾಸಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry